ಕ್ರೀಡೆ

ವಾಂಖೆಡೆನಲ್ಲಿ ಭಾರತದ ವಿಜಯೋತ್ಸವ: ಅಭಿಷೇಕ್ ಶರ್ಮಾ ಆಕರ್ಷಕ ಶತಕ,150 ರನ್ ಗಳ ಭರ್ಜರಿ ಜಯ

ಮುಂಬಯಿ: ನಿನ್ನೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತು. ಅಭಿಷೇಕ್ ಶರ್ಮಾ ಅವರ ಆಕ್ರಮಣಕಾರಿ ಆಟದಿಂದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳ ಬೃಹತ್ ಗುರಿಯನ್ನು ನೀಡಿತು. ಇಂಗ್ಲೆಂಡ್ ಈ ಗರಿಷ್ಠ ಮೊತ್ತವನ್ನು ಬೆನ್ನಟ್ಟವಲ್ಲಿ ವಿಫಲವಾಗಿ ಕೇವಲ 97 ರನ್‌ಗಳಿಗೆ ಆಲೌಟ್ ಆಗಿ ಮಣಿದರು.ಇಂಗ್ಲೆಂಡ್ ಬ್ಯಾಟಿಂಗ್ ವೇಳೆಯಲ್ಲಿ ಭಾರತ ಬೌಲರ್‌ಗಳು ಚಮತ್ಕಾರ ಮೆರೆದರು. 11ನೇ ಓವರ್‌ ಕೊನೆಗೊಳಿಸುವಾಗಲೇ ಇಂಗ್ಲೆಂಡ್ ಸಂಪೂರ್ಣವಾಗಿ ಆಲೌಟ್ ಆಯಿತು. ಟೀಂ ಇಂಡಿಯಾ 150 ರನ್‌ಗಳಿಂದ ಭರ್ಜರಿ ಜಯ ಗಳಿಸುತ್ತಲೇ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿತು.ಅಭಿಷೇಕ್ ಶರ್ಮಾ ಅವರ ಆಕರ್ಷಕ ಶತಕ,ಬೌಲಿಂಗ್ ವಿಭಾಗದ ಉತ್ತಮ ಪ್ರದರ್ಶನ ಮತ್ತು ತಂಡದ ಒಗ್ಗಟ್ಟಿನ ಆಟದಿಂದ ಈ ವಿಜಯ ಸಾಧ್ಯವಾಯಿತು. ಈ ಜಯದಿಂದ ಭಾರತ ತಂಡವು ಟಿ20 ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Leave a Response

error: Content is protected !!