ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡರು.
ಮೋದಿಯವರು ಮಹಾಕುಂಭ ಮೇಳದಲ್ಲಿ ಭಾಗವಹಿಸಿದ ಬಗ್ಗೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ –
“ಪ್ರಯಾಗರಾಜ ಮಹಾಕುಂಭದಲ್ಲಿ ಇಂದು ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವ ಪುಣ್ಯ ಅವಕಾಶ ದೊರಕಿತು. ತಾಯಿ ಗಂಗೆಯ ಆಶೀರ್ವಾದ ಪಡೆದು ಮನಸ್ಸಿಗೆ ಅಪಾರ ಶಾಂತಿ ಮತ್ತು ತೃಪ್ತಿ ದೊರೆತಿದೆ. ದೇಶದ ಎಲ್ಲಾ ನಾಗರಿಕರ ಸೌಭಾಗ್ಯ, ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಗಂಗಾ ಮಾತೆಯಲ್ಲಿ ಪ್ರಾರ್ಥನೆ ಮಾಡಿದೆ. ಹರ ಹರ ಗಂಗೆ!” ಎಂದು ಬರೆದುಕೊಂಡಿದ್ದಾರೆ.
add a comment