ರಾಷ್ಟ್ರೀಯ

ಇಸ್ರೋದ 100ನೇ ರಾಕೆಟ್ ಮಿಷನ್‌ಗೆ ಹಿನ್ನಡೆ: NVS-02 ಉಪಗ್ರಹದಲ್ಲಿ ತಾಂತ್ರಿಕ ದೋಷ!

ಮಂಗಳೂರು/ನವದೆಹಲಿ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಾರಿಸಿದ್ದ ತನ್ನ 100ನೇ ರಾಕೆಟ್ ಉಡಾವಣೆಯ ಕಾರ್ಯಾಚರಣೆಗೆ ತಾಂತ್ರಿಕ ದೋಷ ಎದುರಾಗಿದ್ದು, ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಕಾರ್ಯಾ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜನವರಿ 29ರಂದು ಸ್ರೋ, ಈ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್15 (ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-02) ರಾಕೆಟ್ ಮೂಲಕ ಯಶಸ್ವಿಯಾಗಿ ಉಡ್ಡಯನ ಮಾಡಿತ್ತು.

ಕಾರ್ಯಾಚರಣೆಯು ತಾಂತ್ರಿಕ ದೋಷ ಎದುರಿಸಿದೆ ಎಂದು ಹೇಳಿದ ಇಸ್ರೋ ಈ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. “ಉಪಗ್ರಹವನ್ನು ನಿಗದಿತ ಕಕ್ಷೆಯ ಸ್ಲಾಟ್‌ನಲ್ಲಿ ಇರಿಸುವ ಕಾರ್ಯಾ ತಾಂತ್ರಿಕ ಕಾರಣಗಳಿಂದ ನೆರವೇರಿಲ್ಲ. ಆ ನಿಟ್ಟಿನಲ್ಲಿ ಯತ್ನಗಳು ನಡೆದಿವೆ” ಎಂದು ಹೇಳಿದೆ.

ಎನ್‌ವಿಎಸ್-02 ಅನ್ನು ಭಾರತದ ಮೇಲೆ ಗೊತ್ತುಪಡಿಸಿದ ಭೂಸ್ಥಿರ ಕಕ್ಷೆಯಲ್ಲಿ ಇರಿಸಲಾಗಿದೆ. ಆದರೆ, ಅದರ ‘ಲಿಕ್ವಿಡ್ ಎಂಜಿನ್’ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ, ಅದನ್ನು ಗೊತ್ತುಪಡಿಸಿದ ಕಕ್ಷೆಗೆ ಕಳುಹಿಸುವ ಯತ್ನ ವಿಳಂಬವಾಗುತ್ತದೆ ಅಥವಾ ಆ ಕಾರ್ಯವನ್ನು ಪೂರ್ಣವಾಗಿ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಉಪಗ್ರಹವು ಪ್ರಸ್ತುತ ದೀರ್ಘ ವೃತ್ತಾಕಾರ ಕಕ್ಷೆಯಲ್ಲಿದೆ. ಇಂತಹ ಕಕ್ಷೆಯಲ್ಲಿ ಇರುವ ಉಪಗ್ರಹವನ್ನು ನ್ಯಾವಿಗೇಷನ್‌ಗಾಗಿ ಬಳಸಿಕೊಳ್ಳಲು ಅಗತ್ಯವಿರುವ ಪರ್ಯಾಯ ತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ಇಸ್ರೋ ಹೇಳಿದೆ

Leave a Response

error: Content is protected !!