ಭಾರತಕ್ಕೆ ಆಗಮಿಸಿದ ಇಂಡೋನೇಷ್ಯಾ ಅಧ್ಯಕ್ಷ ಶ್ರೀ ಪ್ರಬೋವೊ ಸುಬಿಯಾಂತೋ; ಮಾನ್ಯ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಂದ ಅದ್ಧೂರಿ ಸ್ವಾಗತ;
![](https://newsroomfirst.com/wp-content/uploads/2025/01/image-7.png)
![](https://newsroomfirst.com/wp-content/uploads/2025/01/image-7.png)
ನವದೆಹಲಿ:75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ ಇಂಡೋನೇಷ್ಯಾ ಅಧ್ಯಕ್ಷರಾದ ಶ್ರೀ ಪ್ರಬೋವೊ ಸುಬಿಯಾಂತೋ ಜನವರಿ 23, 2025 ರಂದು ರಾತ್ರಿ 9 : 15 ಕ್ಕೆ ಭಾರತಕ್ಕೆ ಆಗಮಿಸಿದರು. ಅವರು ನವದೆಹಲಿಯ ವಾಯುಪಡೆ ನಿಲ್ದಾಣ ಪಾಲಮ್‌ನಲ್ಲಿ ವಿಮಾನದಿಂದ ಇಳಿದರು. ಅವರ ಆಗಮನದ ವೇಳೆ, ಭಾರತೀಯ ವಿದೇಶಾಂಗ ಮಂತ್ರಾಲಯದ ರಾಜ್ಯ ಸಚಿವರಾದ ಶ್ರೀ ಪಬಿತ್ರ ಮಾರ್ಗರೀಟಾ ಅವರು ಸ್ವಾಗತಿಸಿದರು.
ಜನವರಿ 25, 2025 ರಂದು ಬೆಳಿಗ್ಗೆ 10 : 00 ಕ್ಕೆ ರಾಷ್ಟ್ರಪತಿ ಭವನದಲ್ಲಿ ಅವರಿಗಾಗಿ ಆಯೋಜಿಸಲಾದ ಸಮಾರಂಭದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು. ಇವರಷ್ಟೇ ಅಲ್ಲದೆ, ವಿದೇಶಾಂಗ ಸಚಿವರಾದ ಶ್ರೀ ಎಸ್. ಜೈ ಶಂಕರ್ ಅವರು ಅಧ್ಯಕ್ಷರನ್ನು ಭೇಟಿಯಾಗಿ, ಕುಶಲೋಪರಿಗಳನ್ನು ವಿಚಾರಿಸಿದ್ದಾರೆ.
![](https://newsroomfirst.com/wp-content/uploads/2025/01/image-8.png)
ಭಾರತ ಪ್ರವಾಸದ ವೇಳೆ ಅವರು ನವದೆಹಲಿಯ ತಾಜ್ ಮಹಲ್ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಭದ್ರತೆ ಮತ್ತು ಸುರಕ್ಷತೆ ಕಾರಣಗಳಿಂದ ಇದಕ್ಕಿಂತ ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಆದರೆ, ಭಾರತದ ನಿಯಮಗಳ ಅನುಸಾರ, ಭೇಟಿಯಲ್ಲಿರುವ ವಿದೇಶಿ ಅತಿಥಿಗಳಿಗೆ ಸಮಗ್ರ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ಇದರ ಸಂಪೂರ್ಣ ಜವಾಬ್ದಾರಿಯು ವಿಶೇಷ ರಕ್ಷಣಾ ದಳ (ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್), ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಇತರ ಭದ್ರತಾ ಸಂಸ್ಥೆಗಳ ಮೇಲೆ ಇರುತ್ತದೆ.