ಚೆoಬು ಗ್ರಾಮದ ಕಲೇರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕುದ್ರೆಪಾಯದಲ್ಲಿ ಐದು ವರ್ಷಕೊಮ್ಮೆ ನಡೆಯುವ ಒತ್ತೆಕೋಲ ಹಾಗೂ ಗುಳಿಗ ದೈವದ ಕೋಲ ಮತ್ತು ಉಪದೈವಗಳ ತಂಬಿಲವು ದಿನಾಂಕ 04-01-2025 ನೇ ಶನಿವಾರ ದಿಂದ 05-01-2025 ನೇ ಆದಿತ್ಯವಾರದ ತನಕ ನಡೆಯಲಿದೆ ದಿನಾಂಕ 04 ನೇ ಶನಿವಾರ ರಾತ್ರಿ ಗಂಟೆ 7-30ಕ್ಕೆ ಮೇಲೆರಿಗೆ ಅಗ್ನಿಸ್ಪರ್ಶ ನಡೆದು 9 ರಿಂದ ಅನ್ನಸಂತರ್ಪಣೆ ನಡೆಯಲಿದೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಗಳ ಅಂಗವಾಗಿ 9-30 ರಿಂದ ಅಪ್ಪು ಮೆಲೋಡಿಸ್ ಚೆoಬು ಕುದ್ರೆಪಾಯ ಇವರಿಂದ ವೈವಿದ್ಯಮಯ ಸಂಗೀತ ರಸಮಂಜರಿ ಹಾಗೂ ನ್ರತ್ಯ ಕಾರ್ಯಕ್ರಮ ನಡೆಯಲಿದೆ ರಾತ್ರಿ ಗಂಟೆ 12.30 ರಿಂದ ಕುಲ್ಚಾಟ ನಡೆಯಲಿದೆ ದಿನಾಂಕ 05 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 05-30 ಕೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಲಿದೆ ನಂತರ ಹರಿಕೆ ಪ್ರಸಾದ ವಿತರಣೆ ಮಾರಿಕ್ಕಳ ಪ್ರವೇಶ ಗುಳಿಗ ದೈವದ ಕೋಲ ನಡೆಯಲಿದೆ ಗಂಟೆ 10 ರಿಂದ ಶ್ರೀ ರಕ್ತೇಶ್ವರಿ ಅಮ್ಮನವರಿಗೆ ತಂಬಿಲ ಕಾರ್ಯಕ್ರಮ ನಡೆಯಲಿದೆ.
add a comment