ನೆಬಿಲೊ ಟೆಕ್ನಾಲಜೀಸ್‌ನ ಸರ್ವರ್ ಹ್ಯಾಕ್: ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು! ಬೆಂಗಳೂರಿನಲ್ಲಿ ಅತಿದೊಡ್ಡ ಸೈಬರ್ ವಂಚನೆ
ಬೆಂಗಳೂರು, ಜುಲೈ 30 – ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ಸೈಬರ್ ಅಪರಾಧವೊಂದು ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಾದ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸರ್ವರ್‌ನ್ನು ಸೈಬರ್ ಖದೀಮರು ಹ್ಯಾಕ್ ಮಾಡಿ, ಸುಮಾರು ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ (44 ಮಿಲಿಯನ್ USDT)…










