ಗಡಿಗಳು ಬದಲಾಗಬಹುದು ಮತ್ತು ಸಿಂಧ್ ಪ್ರಾಂತ್ಯ ಭಾರತಕ್ಕೆ ಮರಳಬಹುದು: ಅಡ್ವಾಣಿ ಹೇಳಿಕೆ ಸ್ಮರಿಸಿದ ರಾಜನಾಥ್ ಸಿಂಗ್

ಗಡಿಗಳು ಬದಲಾಗಬಹುದು ಮತ್ತು ಸಿಂಧ್ ಪ್ರಾಂತ್ಯ ಭಾರತಕ್ಕೆ ಮರಳಬಹುದು: ಅಡ್ವಾಣಿ ಹೇಳಿಕೆ ಸ್ಮರಿಸಿದ ರಾಜನಾಥ್ ಸಿಂಗ್

ನವ ದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ವಿಭಜನೆಯ ನಂತರವೂ ಸಿಂಧ್ (Sindh) ಪ್ರದೇಶ ಭಾರತದೊಂದಿಗೆ ಹೊಂದಿರುವ ನಾಗರಿಕ ಸಂಬಂಧದ ಕುರಿತು ನೀಡಿದ್ದ ಹೇಳಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಸ್ಮರಿಸಿದ್ದಾರೆ. “ಗಡಿಗಳು ಬದಲಾಗಬಹುದು” ಮತ್ತು “ನಾಳೆ ಸಿಂಧ್ ಭಾರತಕ್ಕೆ ಮರಳಬಹುದು” ಎಂದು ಸಿಂಗ್ ಹೇಳಿದ್ದಾರೆ.

ಸಿಂಧಿ ಸಮುದಾಯ (Sindhi community) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಅಡ್ವಾಣಿಯವರು ತಮ್ಮ ಪುಸ್ತಕಗಳಲ್ಲಿ ಒಂದರಲ್ಲಿ ಬರೆದಿದ್ದಾರೆ. ಸಿಂಧಿ ಹಿಂದೂಗಳು, ವಿಶೇಷವಾಗಿ ಅವರ ಪೀಳಿಗೆಯವರು, ಭಾರತದಿಂದ ಸಿಂಧ್ ಬೇರ್ಪಟ್ಟ ವಿಷಯವನ್ನು ಇನ್ನೂ ಒಪ್ಪಿಕೊಂಡಿಲ್ಲ” ಎಂದು ಹೇಳಿದರು.

1947 ರಲ್ಲಿ ಅವಿಭಜಿತ ಭಾರತದ ವಿಭಜನೆಯ ಪರಿಣಾಮವಾಗಿ ಪಾಕಿಸ್ತಾನ (Pakistan) ರಚನೆಯಾಯಿತು, ಮತ್ತು ಸಿಂಧೂ ನದಿಯ (Indus River) ಸಮೀಪವಿರುವ ಸಿಂಧ್ ಪ್ರದೇಶವು ಅಂದಿನಿಂದ ಪಾಕಿಸ್ತಾನದ ಭಾಗವಾಗಿದೆ.

ರಾಷ್ಟ್ರೀಯ