ದುಬೈ (ನ.21): ಭಾರತೀಯ ವಾಯುಪಡೆಯ (IAF) ತೇಜಸ್ ಯುದ್ಧವಿಮಾನವು ದುಬೈ ಏರ್‌ಶೋ ವೇಳೆ ಪತನಗೊಂಡಿದೆ ಎಂದು ವಾಯುಪಡೆ ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದೆ. ಪತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಪ್ರಸ್ತುತ ನಡೆಯುತ್ತಿದೆ.

ಅಂತರರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಈ ಘಟನೆಯು ಸ್ಥಳೀಯ ಸಮಯ ಮಧ್ಯಾಹ್ನ ತೇಜಸ್ ವಿಮಾನದ ಪ್ರದರ್ಶನ ಹಾರಾಟದ ವೇಳೆ ಸಂಭವಿಸಿದೆ. ಪ್ರತಿಷ್ಠಿತ ದುಬೈ ಏರ್‌ಶೋನಲ್ಲಿ ಭಾರತೀಯ ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ಈ ವಿಮಾನವನ್ನು ಬಳಸಲಾಗುತ್ತಿತ್ತು.
ಘಟನೆಯ ನಿಖರ ಕಾರಣ ತಿಳಿದುಬಂದಿಲ್ಲದಿದ್ದರೂ, ಯಾವುದೇ ಸಂಭವನೀಯ ಹಾನಿ ಅಥವಾ ಪೈಲಟ್‌ಗಳ ಸ್ಥಿತಿಯ ಕುರಿತು ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇಎಎಫ್ ಮೂಲಗಳು, “ಘಟನೆಯ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ,” ಎಂದು ತಿಳಿಸಿದ್ದಾರೆ.
ದುಬೈ ಏರ್‌ಶೋ ಜಾಗತಿಕ ವಿಮಾನಯಾನ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ಪ್ರದರ್ಶನವಾಗಿದ್ದು, ವಿಶ್ವದ ಅನೇಕ ದೇಶಗಳು ಮತ್ತು ವಿಮಾನ ತಂತ್ರಜ್ಞಾನ ಸಂಸ್ಥೆಗಳು ಇದರಲ್ಲಿ ಭಾಗವಹಿಸುತ್ತವೆ.

