Cloudflare apologises for outage down: ಕ್ಲೌಡ್‌ಫ್ಲೇರ್ ದೋಷದಿಂದ ಅನೇಕ ಪ್ರಮುಖ ವೆಬ್‌ಸೈಟ್‌ಗಳು ಸ್ಥಗಿತ — ಜಾಗತಿಕ ಮಟ್ಟದಲ್ಲಿ ಸೇವೆಗಳು ವ್ಯತ್ಯಯ

Cloudflare apologises for outage down: ಕ್ಲೌಡ್‌ಫ್ಲೇರ್ ದೋಷದಿಂದ ಅನೇಕ ಪ್ರಮುಖ ವೆಬ್‌ಸೈಟ್‌ಗಳು ಸ್ಥಗಿತ — ಜಾಗತಿಕ ಮಟ್ಟದಲ್ಲಿ ಸೇವೆಗಳು ವ್ಯತ್ಯಯ

ಮಂಗಳವಾರ ಮಧ್ಯಾಹ್ನ ಕ್ಲೌಡ್‌ಫ್ಲೇರ್ ಮೂಲಸೌಕರ್ಯದಲ್ಲಿ ಉಂಟಾದ ದೊಡ್ಡ ಮಟ್ಟದ ತಾಂತ್ರಿಕ ದೋಷದಿಂದ, ವಿಶ್ವದಾದ್ಯಂತ ಹಲವಾರು ಜನಪ್ರಿಯ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು.ಡೌನ್‌ಡಿಟೆಕ್ಟರ್‌ನಲ್ಲಿ ಸಾವಿರಾರು ಬಳಕೆದಾರರು ಒಂದೇ ಸಮಯದಲ್ಲಿ ಪ್ರವೇಶ ತೊಂದರೆಗಳನ್ನು ವರದಿ ಮಾಡಿದರು.

ಕ್ಲೌಡ್‌ಫ್ಲೇರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದಂತೆ,“ಸೈಬರ್ ಬೆದರಿಕೆ ಟ್ರಾಫಿಕ್‌ನ್ನು ನಿಯಂತ್ರಿಸುವ ಕಾನ್ಫಿಗರೇಶನ್ ಫೈಲ್ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸದೇ, ಟ್ರಾಫಿಕ್ ಹ್ಯಾಂಡ್ಲ್ ಮಾಡುವ ಸಾಫ್ಟ್‌ವೇರ್ ಕ್ರ್ಯಾಶ್ ಉಂಟಾಗಿದೆ,” ಎಂದು ತಿಳಿಸಿದೆ.

ಕಂಪನಿಯು ಇದನ್ನು “ಪ್ರಮುಖ ಮಟ್ಟದ ವ್ಯತ್ಯಯ” ಎಂದು ಹೇಳಿದ್ದು,“ಗ್ರಾಹಕರಿಗೂ ಮತ್ತು ಇಂಟರ್ನೆಟ್ ಬಳಕೆದಾರರಿಗೂ ತೊಂದರೆ ಉಂಟಾದಕ್ಕಾಗಿ ಕ್ಷಮೆ ಕೇಳುತ್ತೇವೆ. ಕ್ಲೌಡ್‌ಫ್ಲೇರ್ ಸೇವೆಗಳ ಮಹತ್ವವನ್ನು ಗಮನಿಸಿದರೆ ಯಾವುದೇ ರೀತಿಯ ಡೌನ್‌ಟೈಮ್ ಅಸ್ವೀಕಾರಾರ್ಹ,” ಎಂದು ಹೇಳಿದೆ.

ಸಮಸ್ಯೆಯನ್ನು ಸರಿಪಡಿಸಲಾದರೂ, ಕೆಲವು ಸೇವೆಗಳು ಮರುಸ್ಥಾಪನಾ ಹಂತದಲ್ಲಿ ಇನ್ನೂ ಸಣ್ಣ ದೋಷಗಳನ್ನು ಕಾಣಿಸಬಹುದು ಎಂದು ಕ್ಲೌಡ್‌ಫೇರ್ ತಿಳಿಸಿದೆ.

ಯಾವ ಸೇವೆಗಳು ಹೆಚ್ಚು ವ್ಯತ್ಯಯವಾದವು?

  • X (ಹಳೆಯ Twitter) – ಕೆಲವರಿಗೆ ಕ್ಲೌಡ್‌ಫ್ಲೇರ್ ಮೂಲದ ಸರ್ವರ್ ದೋಷ ಸಂದೇಶ ತೋರಿಸಿತು.
  • ChatGPT – “please unblock challenges cloudflare.com to proceed” ಎಂಬ ದೋಷ ಸಂದೇಶ ಕಾಣಿಸಿತು.
  • Zoom, Canva, Grindr ಸೇರಿದಂತೆ ಹಲವು ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳು ವಿಳಂಬ ಹಾಗೂ ಲೋಡಿಂಗ್ ಸಮಸ್ಯೆಗಳನ್ನು ಎದುರಿಸಿವೆ

ಕ್ಲೌಡ್‌ಫ್ಲೇರ್ ದೋಷದಿಂದ ಉಂಟಾದ ಈ ಜಾಗತಿಕ ವ್ಯತ್ಯಯವು, ಅಂತರ್‌ಜಾಲದ ಮೂಲಸೌಕರ್ಯವು ಒಂದೇ ಕಂಪನಿಯ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಅಂತರಾಷ್ಟ್ರೀಯ ತಂತ್ರಜ್ಞಾನ