Gold Prices Today: ಪ್ರಮುಖ ನಗರಗಳಲ್ಲಿ ಚಿನ್ನದ ದರ ಕುಸಿತ – ಬೆಂಗಳೂರಿನಿಂದ ಚೆನ್ನೈವರೆಗೆ ಇಂದಿನ ದರ ಎಷ್ಟು?

Gold Prices Today: ಪ್ರಮುಖ ನಗರಗಳಲ್ಲಿ ಚಿನ್ನದ ದರ ಕುಸಿತ – ಬೆಂಗಳೂರಿನಿಂದ ಚೆನ್ನೈವರೆಗೆ ಇಂದಿನ ದರ ಎಷ್ಟು?

ಬೆಂಗಳೂರು, (ನ.18): ಡಾಲರ್‌ ಬಲವಾಗಿರುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲ ಸಂಕೇತಗಳು ಕಂಡುಬಂದ ಹಿನ್ನೆಲೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರಗಳು ಇಂದು ಬೆಳಗಿನ ವಹಿವಾಟಿನಲ್ಲಿ ಕುಸಿದಿವೆ.

ಮಂಗಳವಾರ (18 ನವೆಂಬರ್) ಬೆಳಗ್ಗೆ 10:08 ಕ್ಕೆ, MCX Gold ಡಿಸೆಂಬರ್ ಫ್ಯೂಚರ್ಸ್ 1.3% ಕುಸಿದು ₹1,21,333 (10 ಗ್ರಾಂ) ತಲುಪಿದ್ದು, MCX Silver ಡಿಸೆಂಬರ್ ಒಪ್ಪಂದಗಳು 2.38% ಕುಸಿದು ₹1,51,608 (ಪ್ರತಿ ಕೆ.ಜಿ) ಕ್ಕೆ ಇಳಿದಿವೆ.

India Bullion ಮಾಹಿತಿಯ ಪ್ರಕಾರ, ಬೆಳಗ್ಗೆ 10:11ಕ್ಕೆ:

24 ಕ್ಯಾರೆಟ್ ಚಿನ್ನದ ದರ – ₹1,21,780 (10 ಗ್ರಾಂ)

22 ಕ್ಯಾರೆಟ್ ಚಿನ್ನದ ದರ – ₹1,11,632 (10 ಗ್ರಾಂ)

ಬೆಳ್ಳಿ (999 ಫೈನ್) – ₹1,52,370 (ಪ್ರತಿ ಕೆ.ಜಿ)

20 ವರ್ಷಗಳಲ್ಲಿ ಚಿನ್ನದ ದರ ಎಷ್ಟು ಏರಿದೆ?

ಕಳೆದ 20 ವರ್ಷಗಳಲ್ಲಿ ಚಿನ್ನದ ದರವು 1,200% ಏರಿಕೆಯಾಗಿದೆ.2005ರಲ್ಲಿ ₹7,638 ಇದ್ದ ದರ, 2025ರ ಸೆಪ್ಟೆಂಬರ್ ವೇಳೆಗೆ ₹1,25,000ಕ್ಕೂ ಮೇಲು ತಲುಪಿ, 16 ವರ್ಷಗಳಲ್ಲಿ ಧನಾತ್ಮಕ ಲಾಭ ನೀಡಿದೆ.ಈ ವರ್ಷ YTD ಆಧಾರದ ಮೇಲೆ ಚಿನ್ನವು 56% ಏರಿಕೆ ದಾಖಲಿಸಿದೆ.

ಇಂದು ಪ್ರಮುಖ ನಗರಗಳ ಚಿನ್ನದ ದರ (18 ನವೆಂಬರ್)

ಜ್ಯುವೆಲ್ಲರಿಗಳು ಮೇಕಿಂಗ್ ಚಾರ್ಜ್, ತೆರಿಗೆ, GST ಸೇರಿಸಿದ ನಂತರ ಅಂತಿಮ ಬಿಲ್ ದರ ಹೆಚ್ಚಾಗಬಹುದು.

  • ನಗರ 22K (₹) 24K (₹)
  • ಮುಂಬೈ 1,11,320 1,21,440
  • ನವದೆಹಲಿ 1,11,128. 1,21,230
  • ಕೊಲ್ಕತ್ತಾ. 1,11,173. 1,21,280
  • ಅಹಮದಾಬಾದ್1,11,467 1,21,600
  • ಬೆಂಗಳೂರು 1,11,403 1,21,530
  • ಹೈದರಾಬಾದ್ 1,11,485 1,21,620
  • ಚೆನ್ನೈ 1,11,641 1,21,790

ರಾಜ್ಯ ರಾಷ್ಟ್ರೀಯ