ಬಿಗ್‍ಬಾಸ್, ಉಗ್ರo ಖ್ಯಾತಿಯ ನಟ ಉಗ್ರo ಮಂಜು ಜೀವನದಲ್ಲಿ ಹೊಸ ಅಧ್ಯಾಯ: ನಿಶ್ಚಿತಾರ್ಥ ಮಾಡಿಕೊಂಡ ನಟ

ಬಿಗ್‍ಬಾಸ್, ಉಗ್ರo ಖ್ಯಾತಿಯ ನಟ ಉಗ್ರo ಮಂಜು ಜೀವನದಲ್ಲಿ ಹೊಸ ಅಧ್ಯಾಯ: ನಿಶ್ಚಿತಾರ್ಥ ಮಾಡಿಕೊಂಡ ನಟ

ಬಿಗ್‍ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ‘ಉಗ್ರಂ’ ಖ್ಯಾತಿಯ ನಟ ಉಗ್ರಂ ಮಂಜು ಇದೀಗ ಹೊಸ ಜೀವನದ ಹಂತಕ್ಕೆ ಕಾಲಿಟ್ಟಿದ್ದಾರೆ. ಮಂಜು, ಸಂಧ್ಯಾ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನವೆಂಬರ್ 9ರಂದು ಬೆಂಗಳೂರಿನ ಪೀಣ್ಯದಲ್ಲಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೂ ಮುಡಿಸುವ ಶಾಸ್ತ್ರದೊಂದಿಗೆ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ.

ಮಂಜು ಮದುವೆಯಾಗುತ್ತಿರುವ ಹುಡುಗಿ ಸಂಧ್ಯಾ, ಖಾಸಗಿ ಆಸ್ಪತ್ರೆಯ ಆಡ್ಮಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮೂಲತಃ ತುಮಕೂರಿನವರಾಗಿದ್ದು, ಸದ್ಯ ಪೀಣ್ಯದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮನೋರಂಜನೆ ರಾಜ್ಯ