𝐇𝐢𝐬𝐭𝐨𝐫𝐲 𝐌𝐚𝐝𝐞 𝐛𝐲 𝐭𝐡𝐞 𝐏𝐮𝐬𝐡𝐮𝐩 𝐌𝐚𝐧 𝐨𝐟 𝐈𝐧𝐝𝐢𝐚 ಭಾರತದ ಪುಷ್-ಅಪ್ ಮ್ಯಾನ್ ರೋಹ್ತಾಶ್ ಚೌಧರಿ ವಿಶ್ವ ದಾಖಲೆ – ಕೇವಲ ಒಂದು ಗಂಟೆಯಲ್ಲಿ 847 ಪುಷ್-ಅಪ್ಸ್

𝐇𝐢𝐬𝐭𝐨𝐫𝐲 𝐌𝐚𝐝𝐞 𝐛𝐲 𝐭𝐡𝐞 𝐏𝐮𝐬𝐡𝐮𝐩 𝐌𝐚𝐧 𝐨𝐟 𝐈𝐧𝐝𝐢𝐚 ಭಾರತದ ಪುಷ್-ಅಪ್ ಮ್ಯಾನ್ ರೋಹ್ತಾಶ್ ಚೌಧರಿ ವಿಶ್ವ ದಾಖಲೆ – ಕೇವಲ ಒಂದು ಗಂಟೆಯಲ್ಲಿ 847 ಪುಷ್-ಅಪ್ಸ್

ದೆಹಲಿ: ಭಾರತದ “ಪುಷ್-ಅಪ್ ಮ್ಯಾನ್” ಎಂದು ಪ್ರಸಿದ್ಧಿ ಪಡೆದ ರೋಹ್ತಾಶ್ ಚೌಧರಿ ಅವರು ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು “ಒಂದು ಗಂಟೆಯಲ್ಲಿ ಬೆನ್ನಿನ ಮೇಲೆ 60 ಪೌಂಡ್ ಭಾರ ಹೊತ್ತು ಹೆಚ್ಚು ಪುಷ್-ಅಪ್ಸ್ ಮಾಡಿದ ವಿಶ್ವದಾಖಲೆ” ಸ್ಥಾಪಿಸಿದ್ದಾರೆ.

ರೋಹ್ತಾಶ್ ಅವರು ಕೇವಲ ಒಂದು ಗಂಟೆಯಲ್ಲಿ 847 ಪುಷ್-ಅಪ್ಸ್ ಮಾಡಿ, ಹಿಂದಿನ ಸಿರಿಯಾದ 820 ಪುಷ್-ಅಪ್ಸ್ ದಾಖಲೆಯನ್ನು ಮುರಿದು, ಭಾರತಕ್ಕೆ ಹೊಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬಿರುದು ತಂದಿದ್ದಾರೆ. ಈ ಸಾಧನೆಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತಂಡ ಸ್ಥಳದಲ್ಲೇ ದೃಢೀಕರಿಸಿದೆ.

ಫಿಟ್ ಇಂಡಿಯಾ ಚಳವಳಿಯಡಿಯಲ್ಲಿ ನಡೆದ ದಾಖಲೆ ಪ್ರಯತ್ನ

ಈ ದಾಖಲೆಯ ಪ್ರಯತ್ನವನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಫಿಟ್ ಇಂಡಿಯಾ ಚಳವಳಿಯಡಿಯಲ್ಲಿ ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಮನುಷ್ಖ್ ಮಂದವಿಯಾ ಅವರು ಸ್ವತಃ ಹಾಜರಿದ್ದು, ರೋಹ್ತಾಶ್ ಅವರಿಗೆ ಸನ್ಮಾನಿಸಿದರು.

ಸಚಿವ ಮಂದವಿಯಾ, “ರೋಹ್ತಾಶ್ ಚೌಧರಿ ಅವರು ಫಿಟ್ ಇಂಡಿಯಾ ಚಳವಳಿಯ ಆತ್ಮವನ್ನು ಪ್ರತಿಬಿಂಬಿಸುವ ಯುವಕ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಫಿಟ್, ಶಕ್ತಿಶಾಲಿ ಮತ್ತು ಆತ್ಮನಿರ್ಭರ ಭಾರತ’ ಕನಸನ್ನು ಅವರು ತಮ್ಮ ಶ್ರಮದಿಂದ ಮುಂದುವರಿಸುತ್ತಿದ್ದಾರೆ” ಎಂದು ಹೇಳಿದರು.

ರೋಹ್ತಾಶ್ ಅವರ ಭಾವನಾತ್ಮಕ ಪ್ರತಿಕ್ರಿಯೆ

ತಮ್ಮ ಸಾಧನೆಯ ನಂತರ ರೋಹ್ತಾಶ್ ಚೌಧರಿ ಭಾವನಾತ್ಮಕವಾಗಿ, “ನವೆಂಬರ್ 2024ರಲ್ಲಿ ನಾನು 704 ಒನ್-ಲೆಗ್ ಪುಷ್-ಅಪ್ಸ್ ವಿಶ್ವದಾಖಲೆ ನಿರ್ಮಿಸಿ ಅದನ್ನು ನಮ್ಮ ಪ್ರಧಾನಮಂತ್ರಿಗೆ ಸಮರ್ಪಿಸಿದ್ದೆ. ಇಂದಿನ ಹೊಸ ದಾಖಲೆ ನಾನು ನಮ್ಮ ಸೇನಾಪಡೆಯವರಿಗೆ ಹಾಗೂ ‘ಆಪರೇಷನ್ ಸಿಂಧೂರ’ಗೆ ಅರ್ಪಿಸುತ್ತೇನೆ” ಎಂದು ಹೇಳಿದರು.

ಫಿಟ್ ಇಂಡಿಯಾ ಚಳವಳಿ ಈಗ ದೇಶದಾದ್ಯಂತ ಆರೋಗ್ಯ ಮತ್ತು ಶುದ್ಧ ವಾತಾವರಣದ ಪ್ರೇರಣೆ ನೀಡುತ್ತಿದೆ. ‘Sundays on Cycle’ ಮೂಲಕ ಯುವಕರು ಆರೋಗ್ಯಕರ ಭಾರತದ ಕನಸಿಗೆ ಕೈಜೋಡಿಸಬೇಕು, ಎಂದು ಕರೆನೀಡದರು.

ಕ್ರೀಡೆ ರಾಷ್ಟ್ರೀಯ