ಕತ್ರಿನಾ ಕೈಫ್–ವಿಕ್ಕಿ ಕೌಶಲ್ ದಂಪತಿ ಬಾಳಲ್ಲಿ ಮಗುವಿನ ಆಗಮನ : ಸಾಮಾಜಿಕ ಜಾಲತಾಣದ ಮೂಲಕ ಖುಷಿ ಸುದ್ದಿ ಹಂಚಿಕೊಂಡ ಜೋಡಿ

ಕತ್ರಿನಾ ಕೈಫ್–ವಿಕ್ಕಿ ಕೌಶಲ್ ದಂಪತಿ ಬಾಳಲ್ಲಿ ಮಗುವಿನ ಆಗಮನ : ಸಾಮಾಜಿಕ ಜಾಲತಾಣದ ಮೂಲಕ ಖುಷಿ ಸುದ್ದಿ ಹಂಚಿಕೊಂಡ ಜೋಡಿ

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ದಂಪತಿಗೆ ಶುಕ್ರವಾರ (ನವೆಂಬರ್ 7) ಪುತ್ರ ರತ್ನ ಪ್ರಾಪ್ತಿಯಾಗಿದೆ. ಈ ಸಂತಸದ ಸುದ್ದಿಯನ್ನು ದಂಪತಿಗಳು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಕತ್ರಿನಾ ಮತ್ತು ವಿಕ್ಕಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ತಮಕೆ ಗಂಡು ಮಗುವಾಗಿರುವ ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ.ದಂಪತಿಗಳು ಸುಮಾರು ನಾಲ್ಕು ವರ್ಷಗಳ ಬಳಿಕ ಪೋಷಕರಾದ ಸಂತೋಷದಲ್ಲಿದ್ದಾರೆ. ಇವರು 2021ರಲ್ಲಿ ರಾಜಸ್ಥಾನದ ಸವಾಯಿ ಮಧ್ಯಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಭವ್ಯ ಮದುವೆಯಲ್ಲಿ ಒಂದಾದರು.

ವಿಶಿಷ್ಟವಾಗಿ, ಈ ಜೋಡಿ ಯಾವ ಸಿನಿಮಾಗಳಲ್ಲಿಯೂ ಒಟ್ಟಿಗೆ ನಟಿಸಿಲ್ಲ.ಕತ್ರಿನಾ ಕೈಫ್ ಅವರ ಗರ್ಭಧಾರಣೆ ಕುರಿತು ಮೊದಲ ಬಾರಿಗೆ ಅಧಿಕೃತ ಘೋಷಣೆ ಸೆಪ್ಟೆಂಬರ್ 23ರಂದು ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾಗಿತ್ತು. “ನಮ್ಮ ಜೀವನದ ಅತ್ಯಂತ ಸುಂದರ ಅಧ್ಯಾಯವನ್ನು ಪ್ರಾರಂಭಿಸಲು ನಾವು ಹೊರಟಿದ್ದೇವೆ. ಹೃದಯ ತುಂಬಾ ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದೆ,” ಎಂದು ಅವರು ಬರೆದಿದ್ದರು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕ ಸೆಲೆಬ್ರಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳು ಮಹಾಪೂರವೇ ಹರಿದುಬಂದಿದೆ.

ಮನೋರಂಜನೆ ರಾಷ್ಟ್ರೀಯ