ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ವನಿತೆಯರ ತಂಡಕ್ಕೆ ಬಿಸಿಸಿಐಯಿಂದ ₹51 ಕೋಟಿ ಬಹುಮಾನ

ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ವನಿತೆಯರ ತಂಡಕ್ಕೆ ಬಿಸಿಸಿಐಯಿಂದ ₹51 ಕೋಟಿ ಬಹುಮಾನ

BCCI Announces ₹51 Crore Reward: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರಥಮ ಬಾರಿಗೆ ಐಸಿಸಿ ವನಿತೆಯರ ವಿಶ್ವಕಪ್ ಟ್ರೋಫಿಯನ್ನು ಗೆದ್ದಿರುವ ಹಿನ್ನೆಲೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡದ ಆಟಗಾರ್ತಿಯರು, ಬೆಂಬಲ ಸಿಬ್ಬಂದಿ ಹಾಗೂ ಆಯ್ಕೆ ಸಮಿತಿಗೆ ಒಟ್ಟೂ ₹51 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದೆ.

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ಪ್ರಕಟಣೆ ನೀಡಿದ್ದು, “ತಂಡದ ಸಹನಶೀಲತೆ, ಪ್ರತಿಭೆ ಮತ್ತು ಒಗ್ಗಟ್ಟೇ ಈ ಮಹತ್ವದ ಸಾಧನೆಯ ಮೂಲ. ದೇಶದ ಕೋಟ್ಯಾಂತರ ಅಭಿಮಾನಿಗಳ ಕನಸು ಈ ಜಯದ ಮೂಲಕ ಸಾಕಾರವಾಗಿದೆ,” ಎಂದು ಹೇಳಿದರು.

ನವಿ ಮುಂಬೈಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳ ಅಂತರದಿಂದ ಸೋಲಿಸಿ ಇತಿಹಾಸ ನಿರ್ಮಿಸಿತು. ಭಾರತ 299 ರನ್ ಗುರಿಯನ್ನು ನೀಡಿದ ಬಳಿಕ, ದಕ್ಷಿಣ ಆಫ್ರಿಕಾ ತಂಡವನ್ನು 246 ರನ್‌ಗಳಿಗೆ ಆಲೌಟ್ ಮಾಡಿತು. ಶಫಾಲಿ ವರ್ಮಾ 87 ರನ್ ಹಾಗೂ 2 ವಿಕೆಟ್ ಪಡೆದು ‘ಪ್ಲೇಯರ್ ಆಫ್ ದ ಮ್ಯಾಚ್’ ಪ್ರಶಸ್ತಿಯನ್ನು ಗೆದ್ದರೆ, ದೀಪ್ತಿ ಶರ್ಮಾ ‘ಪ್ಲೇಯರ್ ಆಫ್ ದ ಟೂರ್ನಮೆಂಟ್’ ಆಗಿ ಆಯ್ಕೆಯಾದರು.

ಬಿಸಿಸಿಐ ಘೋಷಿಸಿದ ಈ ಬಹುಮಾನ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ಮತ್ತೊಂದು ಮಹತ್ವದ ಹಂತ ಎಂದು ಕ್ರೀಡಾ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ