Lucknow UNESCO Creative City: ಯುನೆಸ್ಕೋ ಕ್ರಿಯೇಟಿವ್ ಸಿಟಿ ಪಟ್ಟಿಗೆ ಲಖ್ನೋ ಸೇರ್ಪಡೆ — ವೈವಧ್ಯಮಯ ಆಹಾರ ಪರಂಪರೆಗೆ ಸಂದ ಗೌರವ

Lucknow UNESCO Creative City: ಯುನೆಸ್ಕೋ ಕ್ರಿಯೇಟಿವ್ ಸಿಟಿ ಪಟ್ಟಿಗೆ ಲಖ್ನೋ ಸೇರ್ಪಡೆ — ವೈವಧ್ಯಮಯ ಆಹಾರ ಪರಂಪರೆಗೆ ಸಂದ ಗೌರವ

ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ನಡೆದ ಯುನೆಸ್ಕೋ ಸಾಮಾನ್ಯ ಸಭೆಯ 43ನೇ ಅಧಿವೇಶನದಲ್ಲಿ ಉತ್ತರಪ್ರದೇಶದ ರಾಜಧಾನಿ ಲಖ್ನೋ ತನ್ನ ಸಮೃದ್ಧ ಮತ್ತು ವೈವಿಧ್ಯಮಯ ಅಡುಗೆ ಪರಂಪರೆಗಾಗಿ “ಯುನೆಸ್ಕೋ ಕ್ರಿಯೇಟಿವ್ ಸಿಟಿ” ಪಟ್ಟಿಗೆ ಸೇರಿದೆ.

ಲಖ್ನೋಗೆ ಈ ಗೌರವ ‘ಗ್ಯಾಸ್ಟ್ರೋನಮಿ’ (Gastronomy) ವಿಭಾಗದಲ್ಲಿ ದೊರೆತಿದ್ದು, ವಿಶ್ವದ 70 ಆಹಾರ ಪರಂಪರೆಯ ನಗರಗಳ ಪೈಕಿ ಒಂದಾಗಿದೆ. ಈ ಪಟ್ಟಿಗೆ ಸೇರಿದ ಭಾರತದ ಎರಡನೇ ನಗರವಾಗಿದ್ದು, ಮುಂಚೆ ಹೈದರಾಬಾದ್ ಮಾತ್ರ ಈ ಗೌರವ ಪಡೆದಿತ್ತು.

ಯುನೆಸ್ಕೋ ಡೈರೆಕ್ಟರ್ ಜನರಲ್ ಔಡ್ರಿ ಅಜೊಲೇ ಹೊಸದಾಗಿ 58 ನಗರಗಳನ್ನು ಕ್ರಿಯೇಟಿವ್ ಸಿಟಿಗಳ ಪಟ್ಟಿಗೆ ಸೇರಿಸಿದ್ದಾರೆ. ಈಗ ಈ ನೆಟ್‌ವರ್ಕ್‌ನಲ್ಲಿ 100 ಕ್ಕೂ ಹೆಚ್ಚು ದೇಶಗಳ 408 ನಗರಗಳು ಸೇರಿವೆ.

ರಾಜ್ಯದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಈ ನಿರ್ಧಾರವನ್ನು ಸ್ವಾಗತಿಸಿ, ಲಖ್ನೋನ ಅಡುಗೆ ಪರಂಪರೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಹೇಳಿದರು. ಈ ಗೌರವದಿಂದ ಆಹಾರ ಪ್ರವಾಸೋದ್ಯಮ (Culinary Tourism) ಕ್ಷೇತ್ರವನ್ನು ಮತ್ತಷ್ಟು ಬೆಳೆಸಲು ಅವಕಾಶ ಸಿಗಲಿದೆ ಎಂದರು.

ಅಂತರಾಷ್ಟ್ರೀಯ ರಾಷ್ಟ್ರೀಯ