ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಬಸ್‌ಗೆ ಬೆಂಕಿ

ದೆಹಲಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಬಸ್‌ಗೆ ಬೆಂಕಿ

ದೆಹಲಿ: ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಿಮಾನದ ಸಮೀಪ ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ಬಸ್‌ಗೆ ಮಂಗಳವಾರ ಅಕಸ್ಮಾತ್ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ.

ಈ ಘಟನೆ ವೇಳೆ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯಂತೆ, ವಿಮಾನ ನಿಲ್ದಾಣದ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಕೆಲವು ನಿಮಿಷಗಳಲ್ಲೇ ನಿಗ್ರಹಿಸಿದೆ. ಪರಿಣಾಮವಾಗಿ ಸಮೀಪ ನಿಲ್ಲಿಸಿದ್ದ ವಿಮಾನಗಳು ಹಾಗೂ ಬೇರೆ ಸೌಲಭ್ಯಗಳಿಗೆ ಯಾವುದೇ ಹಾನಿ ಸಂಭವಿಸುವುದನ್ನು ತಪ್ಪಿಸಲಾಗಿದೆ.

ಯಾರಿಗೂ ಗಾಯಗಳಾಗದಿದ್ದು, ದೊಡ್ಡ ಪ್ರಮಾಣದ ನಷ್ಟವೂ ವರದಿಯಾಗಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ವಾಹನ ಸುದ್ದಿ