ವಿಶ್ವ ಆರ್ಥಿಕತೆಗೆ ಶಕ್ತಿ ತುಂಬಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿ – ಬೆಂಗಳೂರಿಗೆ ಮೊದಲ ಸ್ಥಾನ

ವಿಶ್ವ ಆರ್ಥಿಕತೆಗೆ ಶಕ್ತಿ ತುಂಬಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿ – ಬೆಂಗಳೂರಿಗೆ ಮೊದಲ ಸ್ಥಾನ

ಬೆಂಗಳೂರು: ವಿಶ್ವ ಆರ್ಥಿಕ ಪ್ರಗತಿಯ ಹೊಸ ನಕ್ಷೆಯಲ್ಲಿ ಭಾರತದ ಹಲವು ಪ್ರಮುಖ ನಗರಗಳು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಅಂತರಾಷ್ಟ್ರೀಯ ಸಂಸ್ಥೆಯೊಂದರ ವರದಿ ಪ್ರಕಾರ, ವೇಗವಾಗಿ ಬೆಳೆಯುತ್ತಿರುವ ನಗರಗಳ ಟಾಪ್-10 ಪಟ್ಟಿಯಲ್ಲಿ ಅತ್ಯಧಿಕ ನಗರಗಳು ಭಾರತಕ್ಕೇ ಸೇರಿವೆ ಎನ್ನುವುದು ಹೆಮ್ಮೆಯ ಸಂಗತಿ.

🔸 ಪ್ರಥಮ ಸ್ಥಾನ ಪಡೆದಿದ್ದು ಭಾರತದ ಐಟಿ ರಾಜಧಾನಿ ಬೆಂಗಳೂರೇ.🔸 ಮೂರನೇ ಸ್ಥಾನಕ್ಕೆ ದೆಹಲಿ ಏರಿಕೆಯಾಗಿದೆ. 🔸ಐದನೇ ಸ್ಥಾನದಲ್ಲಿ ಹೈದರಾಬಾದ್ ಮತ್ತು 🔸 ಎಂಟನೇ ಸ್ಥಾನದಲ್ಲಿ ಮುಂಬೈ ಸ್ಥಾನ ಪಡೆದಿವೆ.

ಈ ಪಟ್ಟಿಯಲ್ಲಿ ವಿಯೆಟ್ನಾಂ, ಚೀನಾ, ಸೌದಿ ಅರೆಬಿಯಾ ಮತ್ತು ಫಿಲಿಪ್ಪೀನ್ಸ್ ದೇಶಗಳ ಕೆಲ ನಗರಗಳಿಗೂ ಸ್ಥಾನ ಸಿಕ್ಕಿದೆ.

ಟಾಪ್-10 ಪಟ್ಟಿಯ ನಗರಗಳು

1️⃣ ಬೆಂಗಳೂರು – ಭಾರತ 🇮🇳

2️⃣ ಹೋ ಚಿ ಮಿನ್ – ವಿಯೆಟ್ನಾಂ 🇻🇳

3️⃣ ದೆಹಲಿ – ಭಾರತ 🇮🇳

4️⃣ ಶೆಂಜೆನ್ – ಚೀನಾ 🇨🇳

5️⃣ ಹೈದರಾಬಾದ್ – ಭಾರತ 🇮🇳

6️⃣ ಹನೋಯ್ – ವಿಯೆಟ್ನಾಂ 🇻🇳

7️⃣ ಗುವಾಂಗ್ಜೌ – ಚೀನಾ 🇨🇳

8️⃣ ಮುಂಬೈ – ಭಾರತ 🇮🇳

9️⃣ ಮನಿಲಾ – ಫಿಲಿಪ್ಪೀನ್ಸ್ 🇵🇭

🔟 ರಿಯಾದ್ – ಸೌದಿ ಅರೆಬಿಯಾ 🇸🇦

ಭಾರತದ ಆರ್ಥಿಕ ಭವಿಷ್ಯಕ್ಕೆ ತಂತ್ರಜ್ಞಾನ, ಉದ್ಯೋಗಾವಕಾಶಗಳು, ದೊಡ್ಡಮಟ್ಟದ ಸ್ಟಾರ್ಟ್ಅಪ್ ಚಟುವಟಿಕೆಗಳು ಮತ್ತು ಹೂಡಿಕೆಗಳ ಹೆಚ್ಚಳ—ಈ ಎಲ್ಲದರಿಂದ ಭಾರತೀಯ ನಗರಗಳು ಜಾಗತಿಕ ವಲಯದಲ್ಲೂ ಮಹತ್ವದ ಕೇಂದ್ರಗಳಾಗಿ ರೂಪಾಂತರಗೊಳ್ಳುತ್ತಿವೆ.“ಭಾರತದ ನಗರದ ಅಭಿವೃದ್ಧಿಯೇ ನಾಳೆಯ ಜಾಗತಿಕ ಆರ್ಥಿಕತೆ” ಎಂಬ ಸಂದೇಶವನ್ನೇ ಈ ರ‍್ಯಾಂಕಿಂಗ್ ನೀಡಿದೆ ಎನ್ನಬಹುದು.

ಅಂತರಾಷ್ಟ್ರೀಯ ಉದ್ಯೋಗ ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ