ಬೆಂಗಳೂರು: ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿರುವ ಕನ್ನಡದ ಭಾವಗೀತೆ ‘ಕಾಂತಾರ ಅಧ್ಯಾಯ-1’ ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಹೊಸ ಪ್ರಯಾಣವನ್ನು ಪ್ರಾರಂಭಿಸಲು ಸಜ್ಜಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಅಧಿಕೃತವಾಗಿ ಅಕ್ಟೋಬರ್ 31ರಿಂದ ಚಿತ್ರದ ಡಿಜಿಟಲ್ ಪ್ರೀಮಿಯರ್ ಆಗುವುದಾಗಿ ದೃಢೀಕರಿಸಿದೆ.

ಭೂಮಿ, ಧರ್ಮ ಮತ್ತು ಸಂಸ್ಕೃತಿಯ ಕಥಾಹಂದರದ ಮೂಲಕ ಜನಮನ ಗೆದ್ದ ಈ ಚಿತ್ರ, 2022ರ ಭಾರೀ ಬ್ಲಾಕ್‌ಬಸ್ಟರ್ ಆಗಿದ್ದ ‘ಕಾಂತಾರ’ ಸಿನಿಮಾಕ್ಕೆ ಮುನ್ನುಡಿ ರೂಪದಲ್ಲಿ ನಿರ್ಮಿತವಾಗಿದೆ.
ಭಾರತ ಸೇರಿದಂತೆ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ಚಿತ್ರ ಸ್ಟ್ರೀಮಿಂಗ್‌ಗೆ ಲಭ್ಯವಾಗಲಿದ್ದು, ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲಯಾಳಂ ಡಬ್ ಆವೃತ್ತಿಗಳೂ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಆದರೆ, ಹಿಂದಿ ಡಬ್ ಆವೃತ್ತಿ ಪ್ರಾರಂಭಿಕ ದಿನದಲ್ಲೇ ಲಭ್ಯವಿರುವುದಿಲ್ಲ ಎಂಬ ಮಾಹಿತಿ ದೊರೆತಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 2ರಂದು ಬಿಡುಗಡೆಯಾದ ಸಿನಿಮಾ, ಈಗಾಗಲೇ ಸುಮಾರು 589.50 ಕೋಟಿ ರೂ. ನಿವ್ವಳ ಆದಾಯ ಗಳಿಸಿದೆ. ಕನ್ನಡ ಸಿನಿಮಾಗೆ ಹೊಸ ಮೈಲುಗಲ್ಲು ನಿರ್ಮಿಸಿದ ‘ಕಾಂತಾರ’ ಈಗ ಮನೆಮಂದಿಗೂ ಮನರಂಜನೆ ನೀಡಲು ಸಿದ್ಧವಾಗಿದೆ.

