ಅರಂತೋಡು ತಂಬುರಾಟಿ ಭಗವತಿ ಸಮಿತಿಗಳ ಜಂಟಿ ಮಹಾಸಭೆ

ಅರಂತೋಡು ತಂಬುರಾಟಿ ಭಗವತಿ ಸಮಿತಿಗಳ ಜಂಟಿ ಮಹಾಸಭೆ

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರoತೋಡು ಮತ್ತು ಮಹಿಳಾ ಸಮಿತಿ ಅರಂತೋಡು ಇದರ ಜಂಟಿ ವಾರ್ಷಿಕ ಮಹಾಸಭೆ ಯು ದಿನಾಂಕ 26 ರಂದು ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರoತೋಡು ಇದರ ಅಧ್ಯಕ್ಷ ರಾದ ಪ್ರದೀಪ್. ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆ ಯನ್ನು ಜನಾರ್ಧನ. ಎ. ಎಂ ಮಹಿಳಾ ಸಮಿತಿ ಅಧ್ಯಕ್ಷೆ ಅಮ್ಮಣಿ ಚಿಟ್ಟನ್ನೂರು, ಮಾಜಿ ಅಧ್ಯಕ್ಷ ರಾದ ಶಿವರಾಮ ಉದುಮ, ಕ್ಷೇತ್ರಾಧ್ಯಕ್ಷರಾದ ಕುಂಞ್ಞಿಕಣ್ಣ ಬೇಡಗಂ ರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಪ್ರಾದೇಶಿಕ ಸಮಿತಿ ಯ ಕಾರ್ಯದರ್ಶಿ ಚೇತನ್. ಎ. ಕೆ ರವರು ಮಂಡಿಸಿದರು ಮಹಿಳಾ ಸಮಿತಿಯ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಸುಶ್ಮಿತಾ ಕುಲ್ಚಾರು ರವರು ಮಂಡಿಸಿದರು ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಶ್ರೀ ತಂಬುರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಆಡಳಿತ ಮಂಡಳಿ ಅಧ್ಯಕ್ಷರಾದ ಕುಂಞ್ಞಿಕಣ್ಣಬೇಡಗಂ ರವರು ಮಾತನಾಡಿ ಸಮಿತಿಯ ದ್ಯೇಯೋದ್ದೇಶ ಗಳನ್ನು ವಿವರಿಸಿ ಕ್ಷೇತ್ರ ಜೀರ್ಣೋದ್ದಾರ ಕಾರ್ಯ ಪ್ರಗತಿಯ ಬಗ್ಗೆ ವಿವರಿಸಿದರು ಇನ್ನೊರ್ವ ಮುಖ್ಯ ಅತಿಥಿ ಕ್ಷೇತ್ರ ದ ಆಡಳಿತ ಮಂಡಳಿ ಜೊತೆ ಕಾರ್ಯದರ್ಶಿ ಗೋಪಾಲನ್ ಬೇಡಗಂ ರವರು ಮಾತನಾಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಜೀರ್ಣೋದ್ದಾರ ಕಾರ್ಯಕ್ಕೆ ಸಮುದಾಯ ಬಾಂದವರ ಸಹಾಯ ಯಾಚಿಸಿದರು ಕ್ಷೇತ್ರ ದ ಆಡಳಿತ ಮಂಡಳಿ ಉಪಾಧ್ಯಕ್ಷರ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಗೋಪಾಲ ಮಡತ್ತಿಲ್ ಕ್ಷೇತ್ರ ಮಹಿಳಾ ಸಮಿತಿಯ ಪದಾಧಿಕಾರಿಗಳಾದ ಶ್ರೀಮತಿ ಬಾಲಮಣಿ, ಜಾನಕಿ. ಟಿ. ಆರ್ ಮಾತನಾಡಿದರು. ಈ ಸಭೆಯಲ್ಲಿ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಗೋಪಾಲ ಎಲ್ಪಕಜೆ, ಶಿವರಾಮ ಉದುಮ, ನಾಗೇಶ್ ಕುಲ್ಚಾರು, ಪ್ರವೀಣ್. ಕೆ, ಶ್ರೀಜಿತ್ ಅರಂತೋಡು, ಭಾನುಪ್ರಕಾಶ್ ಕೋಡಂಕೇರಿ, ಇಂದಿರಾ ಪೆರಾಜೆ, ಪದ್ಮಾವತಿ ಕೊಡಂಕೇರಿ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸುಶ್ಮಿತಾ ಕುಲ್ಚಾರು, ಚಾರಿತ್ರ್ಯ ಕೆ. ಜಿ, ಕಾವ್ಯ, ಹೃದೀಶ್ ಕುಲ್ಚಾರು ರವರಿಗೆ ಗೌರವಾರ್ಪಣೆ ನಡೆಯಿತು ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದ ಭಾಗವಾಗಿ ತಾಮ್ರದ ಹೊದಿಕೆ ಅಳವಡಿಸುವ ಬಗ್ಗೆ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಮನವಿಯ ಮೇರೆಗೆ ಅತೀ ಹೆಚ್ಚಿನ ಸಂಖ್ಯೆಯ ಸಮುದಾಯ ಬಾಂಧವರು ಧನ ಸಹಾಯ ಘೋಷಣೆ ಮಾಡಿದರು ಮಹಿಳಾ ಸಮಿತಿ ಯ ಕಾರ್ಯದರ್ಶಿ ಪ್ರೇಮ ಪೆರಾಜೆ, ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಅಭಿಷೇಕ್ ಕುಲ್ಚಾರು, ಮಾಜಿ ಪದಾಧಿಕಾರಿಗಳಾದ ಶ್ರೀಜಿತ್, ಭಾನುಪ್ರಕಾಶ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮ ನಿರ್ವಹಣೆ ಯಲ್ಲಿ ಸಹಕರಿಸಿದರು ಡೀಕ್ಷಾ ಚಾoಬಾಡು ರವರ ಪ್ರಾರ್ಥನೆ ಯೊಂದಿಗೆ ಆರಂಭ ಗೊಂಡ ಕಾರ್ಯಕ್ರಮ ದಲ್ಲಿ ಇಂದಿರಾ ಪೆರಾಜೆ ವಂದನಾರ್ಪಣೆ ಗೈದರು.

ಧಾರ್ಮಿಕ