ಮೂರು ಪಂದ್ಯಗಳ ಒಡಿಐ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಮುಗಿಸಿ ಸಿಡ್ನಿಯಿಂದ ಭಾರತಕ್ಕೆ ವಾಪಸಾಗುತ್ತಿರುವ ಸಂದರ್ಭದಲ್ಲಿ ಹಿರಿಯ ಓಪನರ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಭಾವುಕರಾದರು. ಭಾನುವಾರ ನಡೆದ ಅಂತಿಮ ಒಡಿಐ ಪಂದ್ಯದಲ್ಲಿ ಭಾರತದ 9 ವಿಕೆಟ್‌ಗಳ ಗೆಲುವಿಗೆ ಶತಕದ ಮೂಲಕ ಮಹತ್ವದ ಪಾತ್ರವಹಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಮನದಾಳದ ಸಂದೇಶ ಸಲ್ಲಿಸಿದರು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ 168 ರನ್‌ಗಳ ಅಜೇಯ ಜೊತೆಯಾಟ ಕಟ್ಟಿದರು. ರೋಹಿತ್ ಶತಕ ಮತ್ತು ಕೊಹ್ಲಿ ಅರ್ಧಶತಕ ಗಳಿಸಿ ತಂಡವನ್ನು ಗುರಿ ತಲುಪಿಸಿದರು.
ಪಂದ್ಯ ನಂತರ ಸಿಡ್ನಿಯಿಂದ ಪ್ರಯಾಣ ಪ್ರಾರಂಭಿಸುವಾಗ ರೋಹಿತ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ “One last time, signing off from Sydney” ಎಂದು ಬರೆದು ಪೋಸ್ಟ್ ಹಂಚಿಕೊಂಡರು. ಈ ಭಾವುಕ ಸಂದೇಶ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯಗಳಿಗೆ ಈಗಾಗಲೇ ವಿದಾಯ ಹೇಳಿರುವ ರೋಹಿತ್ ಶರ್ಮಾ ಈಗ ODI ಕ್ರಿಕೆಟ್‌ಗೆ ಮಾತ್ರ ಸೀಮಿತ. ಅವರ ಮುಂದಿನ ದೊಡ್ಡ ಗುರಿ 2027ರ ಒಡಿಐ ವಿಶ್ವಕಪ್. ಆವರೆಗೂ ಭಾರತೀಯ ತಂಡಕ್ಕೆ ಆಸ್ಟ್ರೇಲಿಯಾ ಪ್ರವಾಸದ ಅವಕಾಶ ಮತ್ತೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇದರಿಂದ, ರೋಹಿತ್ ಶರ್ಮಾ ಸಿಡ್ನಿಯಲ್ಲಿ ಕೊನೆಯ ಪಂದ್ಯ ಆಡಿದರೇ? ಎಂಬ ಪ್ರಶ್ನೆಗೆ ಅಭಿಮಾನಿಗಳ ಮನದಲ್ಲಿ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಅವರ ಭಾವುಕ ಪೋಸ್ಟಿನಿಂದ ಸಿಡ್ನಿಯೊಂದಿಗೆ ಅವರ ನಂಟು ಎಷ್ಟು ಗಾಢವಾಗಿದೆಯೋ ಮತ್ತೊಮ್ಮೆ ಸ್ಪಷ್ಟವಾಯಿತು.

