ರಿಯಾದ್‌ ಕಾರ್ಯಕ್ರಮದಲ್ಲಿ ಬಲೂಚಿಸ್ತಾನ ಕುರಿತು ಹೇಳಿಕೆ – ನಟ ಸಲ್ಮಾನ್ ಖಾನ್ ಹೆಸರು ಪಾಕಿಸ್ತಾನದ ಟೆರರಿಸ್ಟ್ ಪಟ್ಟಿಗೆ?

ರಿಯಾದ್‌ ಕಾರ್ಯಕ್ರಮದಲ್ಲಿ ಬಲೂಚಿಸ್ತಾನ ಕುರಿತು ಹೇಳಿಕೆ – ನಟ ಸಲ್ಮಾನ್ ಖಾನ್ ಹೆಸರು ಪಾಕಿಸ್ತಾನದ ಟೆರರಿಸ್ಟ್ ಪಟ್ಟಿಗೆ?

ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನೀಡಿದ ಹೇಳಿಕೆಗಳು ಪಾಕಿಸ್ತಾನದಲ್ಲಿ ರಾಜಕೀಯ ಚರ್ಚೆಯ ಹಾಟ್ ಟಾಪಿಕ್ ಆಗಿರುವುದಾಗಿ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಬಲೂಚಿಸ್ತಾನ‌ ಕುರಿತಾಗಿ ಅವರು ನೀಡಿದ ಹೇಳಿಕೆ, ಪಾಕಿಸ್ತಾನದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಸಲ್ಮಾನ್ ಖಾನ್ ಬಲೂಚಿಸ್ತಾನವನ್ನು ಅನ್ನು “ಭಿನ್ನ ದೇಶ” ಎಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಸರ್ಕಾರದಿಂದಲೂ ಗಂಭೀರ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಕೆಲವು ಮಾಧ್ಯಮ ಮಾಹಿತಿ ಪ್ರಕಾರ, ಪಾಕಿಸ್ತಾನದ ಆಂಟಿ-ಟೆರರಿಸಮ್ ಆಕ್ಟ್ ಅಡಿಯಲ್ಲಿ ಸಲ್ಮಾನ್ ಅವರ ಹೆಸರನ್ನು 4ನೇ ವೇಳಾಪಟ್ಟಿಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎನ್ನಲಾಗುತ್ತಿದೆ.

ಇದರಿಂದ ಸಲ್ಮಾನ್ ಖಾನ್ ಅವರ ಚಲನ-ಚರಿತ್ರೆಯ ಮೇಲೆ ಕಟ್ಟುನಿಟ್ಟಿನ ನಿಗಾ ಹಾಗೂ ಪ್ರಯಾಣ ನಿರ್ಬಂಧಗಳು ಜಾರಿಗೆ ಬರಬಹುದಾಗಿದೆ ಎಂಬ ಊಹೆಗಳು ಕೇಳಿಬರುತ್ತಿವೆ.

ಈ ಕಾರ್ಯಕ್ರಮದಲ್ಲಿ ಶಾರೂಖ್ ಖಾನ್ ಮತ್ತು ಆಮಿರ್ ಖಾನ್ ಕೂಡ ಭಾಗವಹಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರಕ್ಕೆ ಮಹತ್ತರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನದ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಈ ವಿಷಯ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ