ಛತ್ತೀಸ್ಗಢ: ತಂದೆಯು ಮಗಳಿಗೆ ಕೊಡುವ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾದ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಇಲ್ಲಿ ಒಬ್ಬ ರೈತ ತನ್ನ ಮಗಳ ದೀಪಾವಳಿ ಹಾರೈಕೆಯನ್ನು ನಿಜಗೊಳಿಸಲು ಕಳೆದ ಹಲವಾರು ವರ್ಷಗಳಿಂದ ಸಂಗ್ರಹಿಸಿದ್ದ ₹40,000 ಮೌಲ್ಯದ ನಾಣ್ಯಗಳನ್ನು ಬಳಸಿ ಹೊಸ ಸ್ಕೂಟರ್ ಖರೀದಿಸಿದ್ದಾರೆ.

ಮಗಳ ಕನಸು ಸ್ಕೂಟರ್ ಸವಾರಿ ಮಾಡುವುದಾಗಿತ್ತು. ತಂದೆ ಅದನ್ನು ಪೂರ್ಣಗೊಳಿಸಲು ಪ್ರತಿದಿನ ಸ್ವಲ್ಪಸ್ವಲ್ಪವಾಗಿ ನಾಣ್ಯಗಳನ್ನು ಉಳಿಸುತ್ತ ಬಂದರು. ಕೊನೆಗೂ ದೀಪಾವಳಿಯ ಸಂಭ್ರಮದ ಮಧ್ಯೆ ಅವರು ಮಗಳಿಗಾಗಿ ಸ್ಕೂಟರ್ ಖರೀದಿಸಿದರು. ನಾಣ್ಯಗಳನ್ನು ಎಣಿಸಲು ಶೋರೂಮ್ ಸಿಬ್ಬಂದಿ ಗಂಟೆಗಳ ಕಾಲ ಶ್ರಮಿಸಿದರು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಜನರು “ಇದು ನಿಜವಾದ ತಂದೆಯ ಪ್ರೀತಿ”, “ದೀಪಾವಳಿಯ ಅರ್ಥವೇ ಸಂತೋಷ ಹಂಚಿಕೊಳ್ಳುವುದು” ಎಂದು ಪ್ರಶಂಸಿಸುತ್ತಿದ್ದಾರೆ.

