ಅಯೋಧ್ಯೆ:ದೀಪೋತ್ಸವ 2025 ಸಂದರ್ಭದಲ್ಲಿ ಅಯೋಧ್ಯೆಯ ಸರಯೂ ಘಾಟ್‌ಗಳಲ್ಲಿ 26.17 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ಇತಿಹಾಸ ನಿರ್ಮಿಸಲಾಗಿದೆ. ಈ ಅದ್ಭುತ ಕಾರ್ಯಕ್ರಮದೊಂದಿಗೆ ಅಯೋಧ್ಯೆ ಎರಡು ಗಿನ್ನೆಸ್ ವರ್ಲ್ಡ್ ದಾಖಲೆಗಳನ್ನು ಬರೆದಿದೆ.


ಕಾರ್ಯಕ್ರಮದ ಅಂಗವಾಗಿ 2,128 ವೇದ ಪಂಡಿತರಿಂದ ಭವ್ಯ ಮಹಾಆರತಿ ನೆರವೇರಿಸಲಾಯಿತು. ರಾಮಾಯಣದ ಕಥೆಯನ್ನು ಆಧರಿಸಿದ ಲೇಸರ್ ಹಾಗೂ ಡ್ರೋನ್ ಶೋಗಳು, ಜೊತೆಗೆ 32 ಅಡಿ ಎತ್ತರದ ಪುಷ್ಪಕ ವಿಮಾನದ ಪ್ರದರ್ಶನ ಪ್ರೇಕ್ಷಕರ ಮನಸೆಳೆದವು.

ಪರಿಸರ ಸ್ನೇಹಿ ಆಚರಣೆಯಾಗಿ 33,000ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಪಟಾಕಿಗಳ ಬದಲು ಹೋಲೋಗ್ರಾಫಿಕ್ ದೃಶ್ಯ ಪ್ರದರ್ಶನಗಳ ಮೂಲಕ ಬೆಳಕಿನ ಹಬ್ಬವನ್ನು ಆಚರಿಸಲಾಯಿತು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಡ್ರೋನ್ ಹಾಗೂ ಕ್ಯೂಆರ್ ಟ್ರ್ಯಾಕಿಂಗ್ ಮೂಲಕ ದಾಖಲೆ ಪರಿಶೀಲಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.

