500 ಬಿಲಿಯನ್ ಯುಎಸ್ ಡಾಲರ್ ಸಂಪತ್ತಿನೊಂದಿಗೆ ಇತಿಹಾಸ ನಿರ್ಮಿಸಿದ ಎಲಾನ್ ಮಸ್ಕ್

500 ಬಿಲಿಯನ್ ಯುಎಸ್ ಡಾಲರ್ ಸಂಪತ್ತಿನೊಂದಿಗೆ ಇತಿಹಾಸ ನಿರ್ಮಿಸಿದ ಎಲಾನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಗಳ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಇತಿಹಾಸದಲ್ಲೇ ಮೊದಲ ಬಾರಿಗೆ 500 ಬಿಲಿಯನ್ ಅಮೆರಿಕನ್ ಡಾಲರ್‌ಗಳ (ಸುಮಾರು 41 ಲಕ್ಷ ಕೋಟಿ ರೂ.) ಆಸ್ತಿ ಹೊಂದಿದ ವ್ಯಕ್ತಿಯಾಗಿ ಹೆಸರು ಮಾಡಿದ್ದಾರೆ.

ಬುಧವಾರ ಟೆಸ್ಲಾ ಕಂಪನಿಯ ಷೇರು ಬೆಲೆ 4% ಏರಿಕೆಯಾಗಿದ್ದು, ಇದರಿಂದ ಮಸ್ಕ್ ಅವರ ಸಂಪತ್ತಿಗೆ 9.3 ಬಿಲಿಯನ್ ಡಾಲರ್ ಹೆಚ್ಚುವರಿ ಸೇರಿತು. ಏಪ್ರಿಲ್‌ನಲ್ಲಿ ಅವರು ಅಧ್ಯಕ್ಷ ಟ್ರಂಪ್ ಅವರ “ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯನ್ಸಿ (DOGE)”ಯ ನೇತೃತ್ವದಿಂದ ಹಿಂದೆ ಸರಿದು, ಟೆಸ್ಲಾ ಮೇಲೆ ಸಂಪೂರ್ಣ ಗಮನ ಹರಿಸುತ್ತೇವೆ ಎಂದು ಘೋಷಿಸಿದ ಬಳಿಕದಿಂದ ಟೆಸ್ಲಾ ಷೇರುಗಳು ಸುಮಾರು ದ್ವಿಗುಣವಾಗಿವೆ.

ಇದೀಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಮಸ್ಕ್ ಅವರು 2033ರೊಳಗೆ ಪ್ರಪಂಚದ ಮೊದಲ ಟ್ರಿಲಿಯನೇರ್ (1 ಟ್ರಿಲಿಯನ್ ಡಾಲರ್ ಸಂಪತ್ತಿನ ವ್ಯಕ್ತಿ) ಆಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಅಂತರಾಷ್ಟ್ರೀಯ ತಂತ್ರಜ್ಞಾನ