ಬೆಂಗಳೂರಿನಲ್ಲಿ ಒಬ್ಬರೇ ಕಾರಿನಲ್ಲಿ ಪ್ರಯಾಣಿಸಿದರೆ ಟ್ರಾಫಿಕ್ ಟ್ಯಾಕ್ಸ್!

ಬೆಂಗಳೂರಿನಲ್ಲಿ ಒಬ್ಬರೇ ಕಾರಿನಲ್ಲಿ ಪ್ರಯಾಣಿಸಿದರೆ ಟ್ರಾಫಿಕ್ ಟ್ಯಾಕ್ಸ್!

ಬೆಂಗಳೂರು: ನಗರದ ದೈನಂದಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಹೊಸ ಪ್ರಯೋಗಾತ್ಮಕ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಶೀಘ್ರದಲ್ಲೇ ನಗರದ ಹೆಚ್ಚುವರಿ ವಾಹನ ಸಂಚಾರ ಇರುವ ರಸ್ತೆಗಳಲ್ಲಿನ ಸಿಂಗಲ್ ಆಕ್ಯುಪೆನ್ಸಿ ಕಾರುಗಳಿಗೆ (ಒಬ್ಬರೇ ಪ್ರಯಾಣಿಸುವವರಿಗೆ) ‘ಕಾಂಜೆಷನ್ ಟ್ಯಾಕ್ಸ್’ ವಿಧಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ.

ಈ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾರ್ಪೊರೇಟ್‌ ಕ್ಷೇತ್ರದ ಪ್ರಮುಖರು ಹಾಗೂ ನಗರ ಯೋಜಕರು ಭಾಗವಹಿಸಿದ್ದರು. ಕಿರಣ್ ಮಜುಂದಾರ್ ಶಾ ಹಾಗೂ ಯುಲು ಸಹ ಸಂಸ್ಥಾಪಕ ಆರ್.ಕೆ. ಮಿಶ್ರ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ತೆರಿಗೆ ವಿಧಿಸುವ ಉದ್ದೇಶ ನಗರದ ರಸ್ತೆಗಳಲ್ಲಿ ಖಾಸಗಿ ಕಾರುಗಳ ಅತಿಯಾಗಿ ಹೆಚ್ಚುತ್ತಿರುವ ಪ್ರಮಾಣವನ್ನು ನಿಯಂತ್ರಿಸುವುದು ಎಂದು ಸರ್ಕಾರ ತಿಳಿಸಿದೆ.

90 ದಿನಗಳ ಆಕ್ಷನ್ ಪ್ಲಾನ್‌ನ ಭಾಗವಾಗಿ ಈ ಯೋಜನೆ ರೂಪಿಸಲ್ಪಟ್ಟಿದ್ದು, ರಸ್ತೆ ಅಸ್ಫಾಲ್ಟಿಂಗ್ ಗುಣಮಟ್ಟ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಸಮಯಬದ್ಧ ಪೂರ್ಣತೆಗೆ ಕಡ್ಡಾಯ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮೂಲಗಳ ಪ್ರಕಾರ, ಈ ನಿರ್ಧಾರವು ಸಾರಿಗೆ ಸುಗಮತೆ, ಪರಿಸರ ಸಂರಕ್ಷಣೆ ಹಾಗೂ ಆರ್ಥಿಕ ಪರಿಣಾಮಕಾರಿತ್ವ ಸಾಧಿಸುವುದರ ಜೊತೆಗೆ ಜನರನ್ನು ಪರ್ಯಾಯ ಸಾರಿಗೆ ವ್ಯವಸ್ಥೆಗಳ ಕಡೆಗೆ ಪ್ರೇರೇಪಿಸುವ ಗುರಿಯನ್ನೂ ಹೊಂದಿದೆ.

ಹೀಗಾಗಿ, ಬೆಂಗಳೂರಿನ ದಟ್ಟ ವಾಹನ ಸಂಚಾರವಿರುವ ಮಾರ್ಗಗಳಲ್ಲಿ ಒಬ್ಬರೇ ಕಾರು ಚಲಾಯಿಸುವವರಿಗೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ತೆರಿಗೆ ಕಟ್ಟಬೇಕಾದೀತು.

ರಾಜ್ಯ ವಾಹನ ಸುದ್ದಿ