ಲಂಡನ್: ಇಂಗ್ಲೆಂಡ್‌ನ ಪ್ರಮುಖ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರವನ್ನು ಹಂಚಿಕೊಂಡ ವೋಕ್ಸ್, “ಇದು ನನಗೆ ಸರಿಯಾದ ಸಮಯ” ಎಂದು ತಿಳಿಸಿದರು.

2011ರಲ್ಲಿ ಅಂತರರಾಷ್ಟ್ರೀಯ ಪ್ರವೇಶ ಮಾಡಿದ ವೋಕ್ಸ್, ಇಂಗ್ಲೆಂಡ್ ಪರ ಒಟ್ಟು 217 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 396 ವಿಕೆಟ್‌ಗಳನ್ನು ಪಡೆದು, ಬ್ಯಾಟ್‌ನಲ್ಲಿ 3,705 ರನ್‌ಗಳನ್ನು ಬಾರಿಸಿದ್ದಾರೆ.
2019ರ ವಿಶ್ವಕಪ್ ಗೆದ್ದ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದ ವೋಕ್ಸ್, ಸೆಮಿಫೈನಲ್ ಹಾಗೂ ಫೈನಲ್ ಹಂತದಲ್ಲಿ ತಂಡಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದರು. ನಂತರ 2022ರ ಟಿ20 ವಿಶ್ವಕಪ್ ಕಪ್‌ಗೂ ಸಹ ತಾವು ಪಾತ್ರವಹಿಸಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ವೋಕ್ಸ್ ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುತ್ತಾರೆ.

