ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಮಹಾನ್ ಚಿಂತಕ, ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರು ಇಂದು ಬೆಂಗಳೂರಿನಲ್ಲಿ ಇಹ ಲೋಕ ಯಾತ್ರೆ ಮುಗಿಸಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ವಂಶವೃಕ್ಷ, ದಾಟು, ಪರ್ವ, ಗೃಹಭಂಗ, ಕವಲು, ಆವರಣ, ಸಾರ್ಥ ಮುಂತಾದ ಕೃತಿಗಳ ಮೂಲಕ ಓದುಗರ ಮನ ಗೆದ್ದ ಭೈರಪ್ಪ ಅವರು ತಮ್ಮ ತಾತ್ವಿಕ ಹಾಗೂ ಸಾಮಾಜಿಕ ಚಿಂತನೆಗಳಿಂದ ಸಾಹಿತ್ಯ ಜಗತ್ತಿಗೆ ಹೊಸ ದಿಕ್ಕನ್ನು ನೀಡಿದ್ದರು.
ಪದ್ಮಭೂಷಣ (2023), ಸರಸ್ವತಿ ಸಮ್ಮಾನ್ (2010), ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರ ಪಾಲಾಗಿದ್ದವು. 25 ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ ಭೈರಪ್ಪ ಅವರ ನಿಧನವು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

