ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಿಂದ ಮಾಣಿ–ಸಂಪಾಜೆ ಚತುಷ್ಪಥ ಕಾಮಗಾರಿ ಆರಂಭಕ್ಕೆ ಮನವಿ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಿಂದ ಮಾಣಿ–ಸಂಪಾಜೆ ಚತುಷ್ಪಥ ಕಾಮಗಾರಿ ಆರಂಭಕ್ಕೆ ಮನವಿ

ಮಾಣಿ–ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275ರ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದ ಡಿಪಿಆರ್ ಕಾರ್ಯ ಪೂರ್ಣಗೊಂಡಿದೆ. ಇದನ್ನು ವಾರ್ಷಿಕ ಯೋಜನೆಗೆ ಸೇರಿಸಿ ತಕ್ಷಣ ಕಾಮಗಾರಿ ಆರಂಭಿಸಲು ಎನ್‌ಎಚ್ ರೀಜನಲ್ ಆಫೀಸರ್ ನರೇಂದ್ರ ಶರ್ಮ ಅವರಿಗೆ ಮನವಿ ಸಲ್ಲಿಸಿದರು.

ಬುಧವಾರ ಎನ್‌ಎಚ್ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ನರೇಂದ್ರ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು, ಡಿಪಿಆರ್ ತಯಾರಿಗಾಗಿ ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ 3.10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪ್ರಕ್ರಿಯೆ ಅಂತಿಮ ಹಂತ ತಲುಪಿದೆ ಎಂದು ತಿಳಿಸಿದರು.

ಕಾಮಗಾರಿ ಶೀಘ್ರ ಆರಂಭವಾಗಬೇಕಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಯೋಜನೆಯನ್ನು ಸೇರಿಸಿಕೊಳ್ಳುವುದು ಅಗತ್ಯವೆಂದು ಶಾಸಕರು ಒತ್ತಾಯಿಸಿದರು.

ರಾಜ್ಯ ರಾಷ್ಟ್ರೀಯ