ಬೆಂಗಳೂರು: ರಾಜ್ಯದಾದ್ಯಂತ ಸರ್ಕಾರ ಮಾನ್ಯತೆ ಪಡೆದ ಹಾಗೂ ಕೇಂದ್ರ ಬೋರ್ಡ್ ಶಾಲೆಗಳಲ್ಲಿ ದಸರಾ ರಜೆ ಘೋಷಿಸಲಾಗಿದೆ. ಸೆಪ್ಟೆಂಬರ್ 20, 2025ರಿಂದ ಅಕ್ಟೋಬರ್ 6, 2025ರವರೆಗೆ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಅಕ್ಟೋಬರ್ 7ರಿಂದ ನಿಯಮಿತ ತರಗತಿಗಳು ಪುನರಾರಂಭಗೊಳ್ಳಲಿವೆ.

ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಿಬಿಎಸ್ಇ ಶಾಲೆಗಳು ಮುಂಚಿತವಾಗಿ ಅಕ್ಟೋಬರ್ 3ರಿಂದಲೇ ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿ ಶಾಲೆಯ ನಿರ್ಧಾರವನ್ನು ಪೋಷಕರು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕೆಲವು ಶಾಲೆಗಳು ದಸರಾ ರಜೆಯನ್ನು ದೀಪಾವಳಿ ಅಥವಾ ಕ್ರಿಸ್ಮಸ್ ರಜೆಯೊಂದಿಗೆ ಸರಿಗೊಳಿಸಲು ಬದಲಾವಣೆ ಮಾಡುವ ಸಾಧ್ಯತೆಯಿದೆ. ಇದಲ್ಲದೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆಯ ಅಂಗವಾಗಿ ಹೆಚ್ಚುವರಿ ತರಗತಿಗಳನ್ನು ಈ ಅವಧಿಯಲ್ಲಿ ನಡೆಸಲು ಶಾಲೆಗಳು ಮುಂದಾಗಬಹುದು ಎಂದು ತಿಳಿದುಬಂದಿದೆ.

