ಭಾರೀ ಮಳೆಯಿಂದ ವೈಷ್ಣೋ ದೇವಿ ಯಾತ್ರೆ ಮತ್ತೆ ಮುಂದೂಡಿಕೆ

ಭಾರೀ ಮಳೆಯಿಂದ ವೈಷ್ಣೋ ದೇವಿ ಯಾತ್ರೆ ಮತ್ತೆ ಮುಂದೂಡಿಕೆ

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಾತಾ ವೈಷ್ಣೋ ದೇವಿ ಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ ಎಂದು ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ತಿಳಿಸಿದೆ.

ಆಗಸ್ಟ್ 26ರಂದು ನಡೆದ ಭೂಕುಸಿತದಲ್ಲಿ 34 ಮಂದಿ ಸಾವಿಗೀಡಾದ ಬಳಿಕದಿಂದ ಯಾತ್ರೆ ನಿರಂತರವಾಗಿ ಸ್ಥಗಿತಗೊಂಡಿದ್ದು, ಮಾರ್ಗದಲ್ಲಿ ಮತ್ತೆ ಭಾರೀ ಮಳೆ ಮತ್ತು ಗುಡ್ಡ ಕುಸಿತ ಸಂಭವಿಸುತ್ತಿರುವುದರಿಂದ ಭಕ್ತರ ಸುರಕ್ಷತೆಗಾಗಿ ಯಾತ್ರೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯೂ ಹಲವೆಡೆ ಬಂದ್ ಆಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಭಕ್ತರು ಅಧಿಕೃತ ಮಾಹಿತಿಗಳ ಮೂಲಕವೇ ಅಪ್ಡೇಟ್ ಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಧಾರ್ಮಿಕ ರಾಷ್ಟ್ರೀಯ