ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಟರ್ಮಿನಲ್ 3) ಪ್ರದೇಶದಲ್ಲಿ ಸೌದಿ ಅರೇಬಿಯಾಕ್ಕೆ ತೆರಳಲಿರುವ ಪ್ರಯಾಣಿಕರು ಎಲ್ಲೆಂದರಲ್ಲಿ ಕಸ ಹಾಕುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕ ಸ್ಥಳಗಳನ್ನು ಅಶುಚಿತ್ವದಿಂದ ತುಂಬಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂಬುದು ಗಂಭೀರ ಪ್ರಶ್ನೆ ಎಬ್ಬಿಸಿದೆ.

ವಿಶೇಷವೆಂದರೆ, ಇವರು ತೆರಳುತ್ತಿರುವ ಸೌದಿ ಅರೇಬಿಯಾ ದೇಶದಲ್ಲಿ ಕಠಿಣ ನಿಯಮಗಳು, ದಂಡಗಳು ಜಾರಿಗೆ ಇರುತ್ತದೆ. ಅಲ್ಲಿ ನಿಯಮ ಪಾಲಿಸುತ್ತಿರುವ ಭಾರತೀಯರು, ತಮ್ಮದೇ ದೇಶದಲ್ಲಿ ಈ ರೀತಿ ಅಸಭ್ಯ ವರ್ತನೆ ತೋರಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ರೀತಿಯ ಅಸಭ್ಯ ವರ್ತನೆ ಸಾರ್ವಜನಿಕ ಸ್ಥಳಗಳನ್ನು ಮಾತ್ರ ಕೆಡಿಸುವುದಲ್ಲದೆ, ಭಾರತದ ಜಾಗತಿಕ ಇಮೇಜ್‌ಗೂ ಧಕ್ಕೆ ಉಂಟುಮಾಡುತ್ತಿದೆ. ಅತಿ ಹೆಚ್ಚು ವಿದೇಶಿಗರು ಬಳಸುವ ಈ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆಗಳು ನಡೆದಿರುವುದು ಭಾರತದ ಪ್ರವಾಸೋದ್ಯಮಕ್ಕೂ ದುಷ್ಪರಿಣಾಮ ತರುವ ಸಾಧ್ಯತೆ ಇದೆ.
“ಸೌದಿ ಅರೇಬಿಯಾದ ಕಠಿಣ ಕಾನೂನುಗಳನ್ನು ಪಾಲಿಸುವವರು, ತಾಯ್ನಾಡಿನಲ್ಲಿ ಏಕೆ ಅದೇ ಸಂಸ್ಕಾರ ತೋರಿಸುತ್ತಿಲ್ಲ?” ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದಿದೆ.

