ನೇಪಾಳ ಸರ್ಕಾರವು ದೇಶದಲ್ಲಿ ನೋಂದಾಯಿಸದ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಷೇಧ ಹೇರಲು ತೀರ್ಮಾನಿಸಿದೆ.

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಅವರು ಈ ನಿರ್ಧಾರವನ್ನು ಸಾರ್ವಜನಿಕಗೊಳಿಸಿದರು. ನೋಂದಣಿ ಮಾಡದ ಸಾಮಾಜಿಕ ತಾಣಗಳು ದೇಶದ ಕಾನೂನು ಹಾಗೂ ನಿಯಮ ಉಲ್ಲಂಘಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಈ ನಿರ್ಧಾರದ ಅಡಿಯಲ್ಲಿ ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್ ಸೇರಿದಂತೆ ಅನೇಕ ಜಾಗತಿಕ ಸಾಮಾಜಿಕ ಜಾಲತಾಣಗಳು ನೇಪಾಳದಲ್ಲಿ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ. ಸರ್ಕಾರದ ಪ್ರಕಾರ, ದೇಶದಲ್ಲಿ ಬಳಸುವ ಎಲ್ಲಾ ಸಾಮಾಜಿಕ ಜಾಲತಾಣಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಸರ್ಕಾರದ ಈ ತೀರ್ಮಾನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಡಿಜಿಟಲ್ ಭದ್ರತೆಗಾಗಿ ಅಗತ್ಯ ಕ್ರಮವೆಂದು ಸ್ವಾಗತಿಸಿರುವರೆ, ಇನ್ನೂ ಕೆಲವರು ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಟೀಕಿಸಿದ್ದಾರೆ.

