ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ – ದರ್ಶನ್ ಬಳ್ಳಾರಿ ಜೈಲುಗೆ ಶಿಫ್ಟ್ ಸಾಧ್ಯತೆ

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ – ದರ್ಶನ್ ಬಳ್ಳಾರಿ ಜೈಲುಗೆ ಶಿಫ್ಟ್ ಸಾಧ್ಯತೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡಗೆ ಮತ್ತೆ ಹಿನ್ನಡೆಯಾಗಿದೆ. ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ. ಈ ಮೊದಲು ಸುಪ್ರೀಂ ಕೋರ್ಟ್ ಕೂಡಾ ಪವಿತ್ರಾ ಗೌಡ ಬೇಲ್ ಅರ್ಜಿಯನ್ನು ವಜಾಗೊಳಿಸಿತ್ತು. ಸರ್ಕಾರಿ ವಕೀಲರು ಯಾವುದೇ ಕಾರಣಕ್ಕೂ ಬೇಲ್ ನೀಡಬಾರದು ಎಂದು ವಾದಿಸಿದ್ದರು.

ಇನ್ನೊಂದೆಡೆ, ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ವರ್ಗಾವಣೆ ಮಾಡಲು ಪೊಲೀಸರು ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಯಲಿದೆ. ಜೊತೆಗೆ, ದರ್ಶನ್ ಪರ ವಕೀಲರು ಹಾಸಿಗೆ, ದಿಂಬು ಹಾಗೂ ಮನೆ ಊಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರಿ ವಕೀಲರ ವಾದ ಪ್ರಕಾರ, ದರ್ಶನ್ ಪ್ರಭಾವಿ ಆರೋಪಿ ಆಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಆಡಳಿತಾತ್ಮಕ ಹಾಗೂ ಭದ್ರತಾ ಕಾರಣಗಳಿಗಾಗಿ ಬಳ್ಳಾರಿ ಜೈಲು ವರ್ಗಾವಣೆ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ. ಆದರೆ, ದರ್ಶನ್ ಪರ ವಕೀಲರು ಈ ಶಿಫ್ಟ್‌ಗೆ ವಿರೋಧ ವ್ಯಕ್ತಪಡಿಸಿ, ವಕೀಲರ ಭೇಟಿ ಹಾಗೂ ವಿಚಾರಣಾ ಪ್ರಕ್ರಿಯೆಗೆ ಅಡಚಣೆ ಉಂಟಾಗಬಹುದು ಎಂದು ವಾದಿಸಿದ್ದಾರೆ.

ಅಪರಾಧ ರಾಜ್ಯ