ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಹಾಗೂ ಕೊಡಗಿನ ರೋಷನ್ ರಾಮಮೂರ್ತಿ ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ನಂತರ ಅದೇ ದಿನ ಸಂಜೆ ಸರಳ ರಿಸೆಪ್ಷನ್ ಪಾರ್ಟಿಯೂ ನಡೆಯಿತು. ಮದುವೆಯಂತೆ ಕೊಡಗಿನ ಕುಶಾಲನಗರದಲ್ಲಿ ಆಯೋಜಿಸಿದ ಬೀಗರ ಔತಣ ಕೂಟವೂ ಸಿಂಪಲ್ ಆಗಿ ನೆರವೇರಿತು. ಕುಟುಂಬಸ್ಥರು, ಆಪ್ತರು ಮತ್ತು ಅಭಿಮಾನಿಗಳು ಭಾಗಿಯಾದ ಈ ಊಟದಲ್ಲಿ ಹಿತಮಿತವಾದ ಆಚರಣೆ ಮಾತ್ರ ನಡೆದಿದ್ದು, ಯಾವುದೇ ಅಡಂಬರ ಇರಲಿಲ್ಲ.

ಅನುಶ್ರೀ-ರೋಷನ್ ಮದುವೆಗೆ ಶಿವರಾಜ್‌ಕುಮಾರ್ ದಂಪತಿ, ರಾಜ್ ಬಿ ಶೆಟ್ಟಿ, ಡಾಲಿ ಧನಂಜಯ, ತರುಣ್ ಸುಧೀರ್-ಸೋನಲ್ ಮೊಂಥೆರೋ, ಹಂಸಲೇಖ ಸೇರಿದಂತೆ ಹಲವಾರು ಸಿನಿತಾರೆಯರು ಹಾಜರಾಗಿ ಶುಭಾಶಯ ಕೋರಿದ್ದರು. ತಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ, ಮದುವೆಯಲ್ಲಿ ಅವರ ಫೋಟೋವನ್ನು ವಿಶೇಷವಾಗಿ ಇರಿಸಲಾಗಿತ್ತು.
ಅನುಶ್ರೀ-ರೋಷನ್ ಲವ್ ಸ್ಟೋರಿ ಸ್ನೇಹದಿಂದ ಪ್ರೀತಿಯಾಗಿ ಬೆಳೆದಿದ್ದು, ಅಂತಿಮವಾಗಿ ಮದುವೆಯ ಮೂಲಕ ಹೊಸ ಹಾದಿಗೆ ಕಾಲಿಟ್ಟಿದೆ. ನಿರೂಪಣೆಯಿಂದ ಮನೆಮಾತಾದ ಅನುಶ್ರೀ, ಬಿಗ್ ಬಾಸ್ ಸೇರಿದಂತೆ ಹಲವಾರು ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಮದುವೆ, ರಿಸೆಪ್ಷನ್ ಮತ್ತು ಬೀಗರ ಔತಣ ಅವರು ಬಯಸಿದಂತೆ ಸರಳತೆಯಲ್ಲಿ ನೆರವೇರಿವೆ.

