ತಾಯಿಗೆ ನಿಂದನೆ: ಪ್ರಧಾನಿ ಮೋದಿ ಭಾವುಕ ಪ್ರತಿಕ್ರಿಯೆ

ತಾಯಿಗೆ ನಿಂದನೆ: ಪ್ರಧಾನಿ ಮೋದಿ ಭಾವುಕ ಪ್ರತಿಕ್ರಿಯೆ

ಬಿಹಾರದಲ್ಲಿ ನಡೆದ ಕಾಂಗ್ರೆಸ್–ಆರ್‌ಜೇಡಿ ಕಾರ್ಯಕ್ರಮದಿಂದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ವಿರುದ್ಧ ನಡೆದ ಅವಮಾನಕಾರಿ ಹೇಳಿಕೆಗಳು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಮಂಗಳವಾರ ಪ್ರಧಾನಿ ಮೋದಿ ಸ್ವತಃ ಪ್ರತಿಕ್ರಿಯೆ ನೀಡುತ್ತಾ, “ಇದು ನನ್ನ ತಾಯಿಗೆ ಮಾಡಿದ ನಿಂದನೆ ಮಾತ್ರವಲ್ಲ, ಭಾರತದ ಪ್ರತಿಯೊಂದು ತಾಯಿ, ಅಕ್ಕ–ತಂಗಿಗಳಿಗೆ ಮಾಡಿದ ಅವಮಾನ” ಎಂದು ಭಾವೋದ್ರಿಕ್ತವಾಗಿ ಹೇಳಿದರು.

ಬಿಹಾರ ರಾಜ್ಯ ಜೀವಿಕಾ ನಿಧಿ ಸಾಕ್ ಸಹಕಾರಿ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ತಾಯಿ ನಮ್ಮ ಗೌರವ, ನಮ್ಮ ಜೀವನ. ನನ್ನ ತಾಯಿ ಈಗ ಬದುಕಿಲ್ಲ. 100 ವರ್ಷಗಳನ್ನು ಪೂರೈಸಿದ ನಂತರ ನಮ್ಮನ್ನು ಅಗಲಿದರು. ಅವರಿಗೆ ರಾಜಕೀಯದೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಇಂತಹ ತಾಯಿಗೆ ಆರ್‌ಜೇಡಿ–ಕಾಂಗ್ರೆಸ್ ವೇದಿಕೆಯಿಂದ ನಿಂದನೆ ಮಾಡಲಾಗಿದೆ. ಇದರಿಂದ ನನಗೆ ಮಾತ್ರವಲ್ಲ, ಬಿಹಾರದ ಪ್ರತಿಯೊಂದು ತಾಯಿಗೂ ನೋವಾಗಿದೆ” ಎಂದು ಹೃದಯಂಗಮವಾಗಿ ಹೇಳಿದರು.

ಮೋದಿ ಮುಂದುವರೆದು, “ಬಡವರ ನೋವು, ತಾಯಿಯ ಕಷ್ಟವನ್ನು ಬೆಳ್ಳಿ–ಚಿನ್ನದ ಚಮಚಗಳಲ್ಲಿ ಬೆಳೆದ ರಾಜಕೀಯ ಯುವರಾಜ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ನಾಯಕತ್ವದ ಮೇಲೆ ಕಿಡಿಕಾರಿದರು.

ಈ ಕುರಿತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಆಕ್ರೋಶ ವ್ಯಕ್ತಪಡಿಸಿ, ತಮ್ಮ ಎಕ್ಸ್ ಖಾತೆಯಲ್ಲಿ, “ಪ್ರಧಾನಿ ಹಾಗೂ ಅವರ ಸ್ವರ್ಗಸ್ಥ ತಾಯಿಯ ಬಗ್ಗೆ ವೇದಿಕೆಯಲ್ಲಿ ಬಳಸಿದ ಅಸಭ್ಯ ಶಬ್ದಗಳು ನಿಜಕ್ಕೂ ಖಂಡನೀಯ. ಇಂತಹ ಭಾಷೆ ರಾಜಕೀಯದಲ್ಲಿ ಸ್ಥಾನಪಡೆಯಲಾರದು” ಎಂದು ಬರೆದಿದ್ದಾರೆ.

ರಾಷ್ಟ್ರೀಯ