ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2025-26ವನ್ನು ಕರ್ನಾಟಕ ಪರ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಹಾಗೂ ದೇವಚಳ್ಳ ಯುವಕ ಮಂಡಲ (ಲಿ.) ಕಂದ್ರಪ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಆಗಸ್ಟ್ 31ರಂದು ಆದಿತ್ಯವಾರ ದ.ಕ.ಪ.ಹಿ.ಪ್ರಾ. ಶಾಲಾ ಕ್ರೀಡಾಂಗಣ ಆಂದ್ರಪ್ಪಾಡಿಯಲ್ಲಿ ಕ್ರೀಡಾಕೂಟ ಜರುಗಲಿದೆ. ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್, ತ್ರೋಬಾಲ್, ಓಟ, ಶಾಟ್ಪುಟ್, ಉದ್ದ ಜಿಗಿತ, ಎತ್ತರ ಜಿಗಿತ ಹಾಗೂ 4×100 ಮೀ. ರಿಲೇ ಸ್ಪರ್ಧೆಗಳು ನಡೆಯಲಿವೆ.
ವಿಶೇಷವಾಗಿ ಪುರುಷರ 5000 ಮೀ. ಓಟ ಹಾಗೂ ಮಹಿಳೆಯರ 3000 ಮೀ. ಓಟ ಪ್ರಮುಖ ಆಕರ್ಷಣೆ ಆಗಲಿದೆ. ಎಲ್ಲಾ ಸ್ಪರ್ಧೆಗಳು ಸೆಪ್ಟೆಂಬರ್ 21ರಂದು ಉದ್ಘಾಟನೆಯ ಮುಂಚಿತವಾಗಿ ಪ್ರಾರಂಭವಾಗಲಿದ್ದು, ಫುಟ್ಬಾಲ್ ಪಂದ್ಯಾಟವು ಸೆಪ್ಟೆಂಬರ್ 3ರಂದು ಕಂದಾರಿ ದ.ಪಂ.ಬ್ರಾ. ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಾಸ್ಕೆಟ್ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ಬಾಲ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ಟೆನ್ನಿಸ್, ಬೆಸ್ಬಾಲ್ ಹಾಗೂ ಹರ್ಡಲ್ಸ್ ಮುಂತಾದ ಸ್ಪರ್ಧೆಗಳು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜನೆಯಾಗಲಿವೆ.
ಸ್ಪರ್ಧಾಳುಗಳು ಬೆಳಗ್ಗೆ 9:30ರೊಳಗೆ ಸ್ಥಳಕ್ಕೆ ಹಾಜರಾಗಬೇಕಾಗಿದ್ದು, 9:45 ನಂತರ ಬಂದ ತಂಡಗಳಿಗೆ ಅವಕಾಶವಿರುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

