ಭಾರತದಲ್ಲಿ ವಾಪಸಾಯ್ತಾ ಟಿಕ್‌ಟಾಕ್? ವೆಬ್‌ಸೈಟ್ ಲಭ್ಯ, ಆಪ್ ಮಾತ್ರ ಕಾಣಿಸಿಲ್ಲ

ಭಾರತದಲ್ಲಿ ವಾಪಸಾಯ್ತಾ ಟಿಕ್‌ಟಾಕ್? ವೆಬ್‌ಸೈಟ್ ಲಭ್ಯ, ಆಪ್ ಮಾತ್ರ ಕಾಣಿಸಿಲ್ಲ

ಭಾರತ ಸರ್ಕಾರ 2020ರ ಜೂನ್‌ನಲ್ಲಿ ಭದ್ರತಾ ಕಾರಣಗಳಿಂದ ನಿಷೇಧಿಸಿದ ಚೀನಾದ ಶಾರ್ಟ್ ವಿಡಿಯೋ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಮತ್ತೆ ಚರ್ಚೆಗೆ ಕಾರಣವಾಗಿದೆ. ಸುಮಾರು 5 ವರ್ಷಗಳ ಬಳಿಕ ಇದೀಗ ಭಾರತದಲ್ಲಿ ಟಿಕ್‌ಟಾಕ್ ವೆಬ್‌ಸೈಟ್ ಮತ್ತೆ ಲಭ್ಯವಾಗುತ್ತಿರುವುದಾಗಿ ಬಳಕೆದಾರರು ತಿಳಿಸಿದ್ದಾರೆ.

ಆದಾಗ್ಯೂ, ಟಿಕ್‌ಟಾಕ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್‌ಗಳಲ್ಲಿ ಇನ್ನೂ ಲಭ್ಯವಿಲ್ಲ. ಇದರ ಪರಿಣಾಮವಾಗಿ ಆಪ್ ಬಳಸುವ ಅವಕಾಶ ಇಲ್ಲದಿದ್ದರೂ, ವೆಬ್‌ಸೈಟ್ ಮೂಲಕ ಟಿಕ್‌ಟಾಕ್‌ಗೆ ಪ್ರವೇಶಿಸಬಹುದಾಗಿದೆ ಎಂದು ಕೆಲವರು ಹೇಳಿದ್ದಾರೆ.

ಈ ಬೆಳವಣಿಗೆ ಟಿಕ್‌ಟಾಕ್ ಭಾರತಕ್ಕೆ ಮರುಪ್ರವೇಶಿಸುವ ಸಾಧ್ಯತೆಗಳ ಬಗ್ಗೆ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ ಅಧಿಕೃತವಾಗಿ ಭಾರತ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಅಥವಾ ಅನುಮೋದನೆ ಬಂದಿಲ್ಲ.

ಅಂತರಾಷ್ಟ್ರೀಯ ತಂತ್ರಜ್ಞಾನ ರಾಷ್ಟ್ರೀಯ