ಭಾರತದ ಮಾರ್ಗದರ್ಶನದಲ್ಲಿ ಜಗತ್ತಿಗೆ ನವ ದಿಕ್ಕು: ರಾಂಸರ್‌ ಸಮ್ಮೇಳನದಲ್ಲಿ ಜಲಾಶಯಗಳಿಗಾಗಿ ಸುಸ್ಥಿರ ಜೀವನಶೈಲಿಗೆ ಜಾಗತಿಕ ಒಪ್ಪಿಗೆ

ಭಾರತದ ಮಾರ್ಗದರ್ಶನದಲ್ಲಿ ಜಗತ್ತಿಗೆ ನವ ದಿಕ್ಕು: ರಾಂಸರ್‌ ಸಮ್ಮೇಳನದಲ್ಲಿ ಜಲಾಶಯಗಳಿಗಾಗಿ ಸುಸ್ಥಿರ ಜೀವನಶೈಲಿಗೆ ಜಾಗತಿಕ ಒಪ್ಪಿಗೆ

ಹರಾರೆ, ಜಿಂಬಾಬ್ವೆ | ಆಗಸ್ಟ್ 3, 2025 — ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ Mission LiFE (ಜೀವನಶೈಲಿಯ ಮೂಲಕ ಪರಿಸರ ಸಂರಕ್ಷಣಾ ಅಭಿಯಾನ)ದ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಮುಂದಿನ ಹಂತಕ್ಕೆ ತಲುಪಿಸುವತ್ತ ಭಾರತವಿಟ್ಟ ಮಹತ್ವದ ಹೆಜ್ಜೆಗೆ ಇಂದು ಬೃಹತ್ ಬೆಂಬಲ ಸಿಕ್ಕಿದೆ.

“ಜಲಾಶಯಗಳ ಜ್ಞಾನಪೂರ್ಣ ಬಳಕೆಗಾಗಿ ಸಸ್ಯಹಾರ ಆಧಾರಿತ ಜೀವನಶೈಲಿಗೆ ಉತ್ತೇಜನ” ಎಂಬ ಭಾರತದ ಪ್ರಸ್ತಾವನೆ, ರಾಂಸರ್ ಒಪ್ಪಂದದ 15ನೇ ಸಮ್ಮೇಳನ (CoP15)ದಲ್ಲಿ ಅಂಗೀಕೃತವಾಯಿತು. ಈ ಸಮ್ಮೇಳನ ಜಿಂಬಾಬ್ವೆಯ ಹರಾರೆಯಲ್ಲಿ ನಡೆದಿದ್ದು, ಜಲಾಶಯಗಳ ಸಂರಕ್ಷಣೆಯ ಕುರಿತು ಜಗತ್ತಿನ ಪ್ರಮುಖ ದೇಶಗಳ ಒಗ್ಗೂಡುವ ವೇದಿಕೆಯಾಗಿದೆ.ಭಾರತದ ಈ ಮೊದಲ ಪ್ರಸ್ತಾವನೆಗೆ 172 ದೇಶಗಳು ಮತ್ತು 6 ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಪೂರ್ಣ ಬೆಂಬಲ ದೊರೆಯಿತು. ಇದು ಭಾರತದ ಪ್ರಭಾವಶಾಲಿ ಪರಿಸರ ನೀತಿಗೆ ಜಾಗತಿಕ ಮಟ್ಟದಲ್ಲಿ ದೊರೆತ ಮನ್ನಣೆಯಾಗಿದೆ.

ಇದು ಭಾರತವಷ್ಟೇ ಅಲ್ಲದೇ, ಪ್ರಕೃತಿಯೊಂದಿಗೆ ಹೊಂದಾಣಿಕೆಯ ಜೀವನದ ಮೇಲೆ ನಂಬಿಕೆಯಿಟ್ಟಿರುವ ಜಗತ್ತಿನ ಜಯವಾಗಿದೆ,” Mission LiFE ಪ್ರತಿಯೊಬ್ಬನನ್ನು ‘ಪ್ಲಾನೆಟ್ ಫ್ರೆಂಡ್ಲಿ’ ನಾಯಕನಾಗಿ ರೂಪಿಸುವ ಗುರಿಯನ್ನಿಟ್ಟುಕೊಂಡಿದೆ. ಈ ಪ್ರಸ್ತಾವನೆಯ ಮೂಲಕ ಆ ಸಂದೇಶವನ್ನು ನಾವು ಜಾಗತಿಕ ನೀತಿಯ ಭಾಗವನ್ನಾಗಿ ಮಾಡಿದ್ದೇವೆ.” ಎಂದು ಭಾರತೀಯ ಪರಿಸರ ಸಚಿವರು ಪ್ರತಿಕ್ರಿಯಿಸಿದರು.

ಪ್ರಮುಖ ಅಂಶಗಳು:

  • ಜಿಂಬಾಬ್ವೆಯ ರಾಂಸರ್ CoP15 ಸಮ್ಮೇಳನದಲ್ಲಿ ಅಂಗೀಕಾರಗೊಂಡಿತು.
  • 172 ದೇಶಗಳು ಮತ್ತು 6 ಅಂತಾರಾಷ್ಟ್ರೀಯ ಅಂಗಸಂಸ್ಥೆಗಳು ಬೆಂಬಲ ನೀಡಿವೆ.
  • ಜಲಾಶಯಗಳ ಸಂರಕ್ಷಣೆಯಲ್ಲಿ ವೈಯಕ್ತಿಕ ಜವಾಬ್ದಾರಿ ಹಾಗೂ ಸಮುದಾಯದ ಭಾಗವಹಿಸುವಿಕೆಗೆ ಒತ್ತಾಸೆ ನೀಡಿದೆ.
  • ಭಾರತದಲ್ಲಿನ ಜಲಾಶಯ ಪುನಶ್ಚೇತನ ಮತ್ತು ಜನಸಾಮಾನ್ಯರ ನೇತೃತ್ವದ ಸಂರಕ್ಷಣಾ ಪ್ರಯತ್ನಗಳಿಂದ ಕಂಡ ಯಶಸ್ಸುಗಳನ್ನು ಆಧಾರವಾಗಿಟ್ಟುಕೊಂಡಿದೆ.
  • ಪರಿಸರ ಸಂರಕ್ಷಣೆಯಲ್ಲಿ ಜೀವನಶೈಲಿಯನ್ನು ಆಧರಿಸಿದ ಹೊಸ ಅಧ್ಯಾಯವನ್ನು ಜಾಗತಿಕ ಮಟ್ಟದಲ್ಲಿ ಪ್ರಾರಂಭಿಸಿದೆ.

ಜಲಾಶಯ ಸಂರಕ್ಷಣೆಯಲ್ಲಿ ಭಾರತದ ನಾಯಕತ್ವ

ಭಾರತದಲ್ಲಿ ಈಗ 80 ರಾಂಸರ್ ಮಾನ್ಯತೆ ಪಡೆದ ಜಲಾಶಯಗಳಿವೆ. ಭಾರತವು ತನ್ನ ಜಲಪರಿಸರಗಳನ್ನು ರಕ್ಷಿಸಲು ಸ್ಪಷ್ಟವಾದ ಕ್ರಮಗಳನ್ನು ಕೈಗೊಂಡಿದೆ. “ಸೇವ್ ದ ವೆಟ್ ಲ್ಯಾಂಡ್ಸ್” (ಜಲಾಶಯಗಳನ್ನು ಉಳಿಸೋಣ) ಎಂಬ ಅಭಿಯಾನ, ಜನಾಧಾರಿತ ಪುನಶ್ಚೇತನ ಕಾರ್ಯಕ್ರಮಗಳು, ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮ ಮಾದರಿಗಳ ಮೂಲಕ ಭಾರತ ಸಂರಕ್ಷಣೆಯನ್ನು ಸಂಸ್ಕೃತಿ ಮತ್ತು ಜೀವನೋಪಾಯಗಳೊಂದಿಗೆ ಹೊಂದಾಣಿಕೆ ಮಾಡುತ್ತಿದೆ.

Mission LiFE (ಮಿಷನ್ ಲೈಫ್) ಎಂಬ ಅಭಿಯಾನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು COP26 ನಲ್ಲಿ ಗ್ಲಾಸ್ಗೋನಲ್ಲಿ ಪ್ರಾರಂಭಿಸಿದರು. ಇದಕ್ಕೆ ಯುಎನ್‌ (ಸಂಯುಕ್ತ ರಾಷ್ಟ್ರ) ಸಹ ಬೆಂಬಲ ನೀಡಿದೆ. ಈ ಅಭಿಯಾನವು ಸುಸ್ಥಿರ ಬಳಕೆ ಪದ್ಧತಿ, ಸಂಪತ್ತಿನ ಸಮರ್ಥ ಬಳಕೆ, ಮತ್ತು ಪರಿಸರ ಸ್ನೇಹಿ ದೈನಂದಿನ ಆಯ್ಕೆಗಳನ್ನು ಉತ್ತೇಜಿಸುತ್ತದೆ. ಈಗ ರಾಂಸರ್ ಸಮ್ಮೇಳನದಲ್ಲಿ ಭಾರತ ತಂದ ಪ್ರಸ್ತಾವನೆ, Mission LiFE ನ ಸಂದೇಶವನ್ನು ಮೊದಲ ಬಾರಿಗೆ ಅಂತರರಾಷ್ಟ್ರೀಯ ಒಪ್ಪಂದದ ಭಾಗವನ್ನಾಗಿ ಮಾಡಲಾಗಿದೆ.

 ಜಾಗತಿಕ ಪ್ರತಿಕ್ರಿಯೆ

ಜಗತ್ತಿನ ಪರಿಸರ ತಜ್ಞರು ಭಾರತವು ತೆಗೆದುಕೊಂಡ ಈ ಮುಂದಾಳುತ್ವದ ಹೆಜ್ಜೆಯನ್ನು “ದೂರದೃಷ್ಟಿಯುಳ್ಳದು,” “ಸಮಯೋಚಿತವಾದದು,” ಮತ್ತು “ಪರಿವರ್ತನೆ ತರುವಂತಹದು” ಎಂದು ಪ್ರಶಂಸಿಸಿದ್ದಾರೆ.

“ಭಾರತವು ಜೀವನಶೈಲಿ, ಸಂಸ್ಕೃತಿ ಮತ್ತು ಸಂರಕ್ಷಣೆಯ ನಡುವೆ ಸಂಬಂಧವನ್ನು ಸ್ಪಷ್ಟವಾಗಿ ತೋರಿಸಿದೆ. ಇತರ ರಾಷ್ಟ್ರಗಳಿಗೆ ಉತ್ತಮ ಮಾದರಿಯಾಗಿದೆ,” ಎಂದು ರಾಂಸರ್ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಡಾ. ಜೆನ್ ಥಾಮ್ಸನ್ ಹೇಳಿದರು. ಈ ನಿರ್ಧಾರವು ಮುಂದಿನ ಪೀಳಿಗೆಗಳಿಗೆ ಜಲಾಶಯಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದಕ್ಕೆ ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ, ಎಂದು ಅವರು ಅಭಿಪ್ರಾಯ ಪಟ್ಟರು.

ಈ ನಿರ್ಧಾರವು ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಕೆಳಗಿನ ಕಾರ್ಯಗಳನ್ನು ಕೈಗೊಳ್ಳುವಂತೆ ಕರೆ ನೀಡುತ್ತದೆ:

  • ಜಲಾಶಯ-ಆಧಾರಿತ ಸಮುದಾಯಗಳಲ್ಲಿ ಸುಸ್ಥಿರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದು.
  • ಪ್ರವಾಸೋದ್ಯಮ, ಕೃಷಿ ಮತ್ತು ನಗರ ಯೋಜನೆಗಳಲ್ಲಿ, ವಿಶೇಷವಾಗಿ ಜಲಾಶಯಗಳ ಸುತ್ತಮುತ್ತ ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು
  • ಯಶೋಗಾಥೆಗಳನ್ನು ಮತ್ತು ಉತ್ತಮ ಮಾದರಿಗಳನ್ನು ಜಾಗತಿಕವಾಗಿ ಹಂಚಿಕೊಳ್ಳುವುದು.

ಇಂದಿನ ಜಗತ್ತು ಹವಾಮಾನ ವೈಪರಿತ್ಯ ಮತ್ತು ಜೈವವೈವಿಧ್ಯ ನಾಶ – ಈ ಎರಡು ಬೃಹತ್ ಸಂಕಷ್ಟಗಳನ್ನು ಎದುರಿಸುತ್ತಿರುವಾಗ, CoP15ರಲ್ಲಿ ಭಾರತದ ನಾಯಕತ್ವವು ಒಂದು ಆಶಾಕಿರಣವಾಗಿ ಹೊಳೆಯುತ್ತಿದೆ. ಜೀವನಶೈಲಿಯಲ್ಲಿನ ಚಿಕ್ಕ ಬದಲಾವಣೆಗಳನ್ನು ಕೋಟ್ಯಾಂತರ ಜನರು ಅನುಸರಿಸಿದಾಗ  ನಮ್ಮ ಗ್ರಹದ ಅತ್ಯಂತ ಸೂಕ್ಷ್ಮ, ನಾಜೂಕಾದ  ಪರಿಸರಗಳನ್ನು ರಕ್ಷಿಸಬಹುದು. ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ.

ಅಂತರಾಷ್ಟ್ರೀಯ