ನವದೆಹಲಿ, ಆಗಸ್ಟ್ 3:
ಭಾರತದ ಸರಕಾರದ ಮಾಲೀಕತ್ವದ ದೂರಸಂಪರ್ಕ ಸಂಸ್ಥೆ ಭಾರತ್ ಸಂಚಾರ ನಿಗಮ್ ಲಿಮಿಟೆಡ್ (BSNL), ದೇಶದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗ್ರಾಹಕರಿಗಾಗಿ ಹೊಸ ಪ್ರಚಾರಾತ್ಮಕ ಯೋಜನೆಯಾದ ‘ಫ್ರೀಡಂ ಪ್ಲಾನ್’ ಅನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಯೋಜನೆಗೆ ಕೇವಲ ₹1 ಮಾತ್ರ ಶುಲ್ಕವಾಗಿದ್ದು, ಆಗಸ್ಟ್ 31, 2025 ರವರೆಗೆ ಸೀಮಿತ ಅವಧಿಗೆ ಲಭ್ಯವಿರುತ್ತದೆ.

ಈ ಯೋಜನೆಯ ಅಡಿಯಲ್ಲಿ, ಗ್ರಾಹಕರು BSNL ನ ಸ್ವದೇಶಿ ಅಭಿವೃದ್ಧಿಪಡಿಸಿದ 4G ಜಾಲದ ಸೇವೆಗಳನ್ನು ಒಂದು ತಿಂಗಳ ಕಾಲ ಉಚಿತವಾಗಿ ಅನುಭವಿಸಬಹುದು.
ಯೋಜನೆಯ ವೈಶಿಷ್ಟ್ಯಗಳು ಈಂತಿವೆ:
🔸 ಅನಿಯಮಿತ ಧ್ವನಿ ಕರೆಗಳು – ಸ್ಥಳೀಯ ಮತ್ತು STD ಕರೆಗಳಿಗೆ ಅನ್ವಯವಾಗುತ್ತದೆ.
🔸 ಪ್ರತಿದಿನ 2 ಜಿಬಿ ಉಚಿತ ಡೇಟಾ – ವೇಗದ 4G ಇಂಟರ್ನೆಟ್.
🔸 ಪ್ರತಿದಿನ 100 SMSಗಳು – ಎಲ್ಲಾ ನೆಟ್ವರ್ಕ್ಗಳಿಗೆ ಅನ್ವಯ.
🔸 ಬಿಎಸ್ಎನ್ಎಲ್ ಸಿಮ್ ಕಾರ್ಡ್ ಉಚಿತ – ಹೊಸ ಸಿಮ್ ಪಡೆಯಲು ಯಾವುದೇ ಶುಲ್ಕವಿಲ್ಲ.
ಈ ಯೋಜನೆ ಪಡೆಯಲು ಆಸಕ್ತರಾದವರು ಹತ್ತಿರದ BSNL ಗ್ರಾಹಕ ಸೇವಾ ಕೇಂದ್ರ ಅಥವಾ ಅಧಿಕೃತ ರಿಟೇಲರ್ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಅಥವಾ ಸಹಾಯಕ್ಕಾಗಿ ಉಚಿತ ಸಹಾಯವಾಣಿ ಸಂಖ್ಯೆ 1800-180-1503 ಅನ್ನು ಸಂಪರ್ಕಿಸಬಹುದು.

ಯೋಜನೆಯನ್ನು ಘೋಷಿಸಿದ BSNL ಅಧ್ಯಕ್ಷ ಹಾಗೂ ವ್ಯವಸ್ಥಾಪನಾ ನಿರ್ದೇಶಕ ಶ್ರೀ ಎ. ರಾಬರ್ಟ್ ಜೆ. ರವಿ ಅವರು ಹೇಳಿದ್ದಾರೆ:
“ಆತ್ಮನಿರ್ಭರ ಭಾರತ ಮಿಷನ್ ಅಡಿಯಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ BSNL 4G ಜಾಲದಿಂದ ಭಾರತವು ತನ್ನದೇ ಆದ ದೂರಸಂಪರ್ಕ ತಂತ್ರಜ್ಞಾನ ನಿರ್ಮಿಸಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಈ ‘ಫ್ರೀಡಂ ಪ್ಲಾನ್’ ನೊಂದಿಗೆ ಪ್ರತಿಯೊಬ್ಬ ಭಾರತೀಯರೂ ನಮ್ಮ ಸ್ಥಳೀಯ ತಂತ್ರಜ್ಞಾನವನ್ನು 30 ದಿನಗಳ ಕಾಲ ಉಚಿತವಾಗಿ ಪ್ರಯೋಗಿಸಿ ಅನುಭವಿಸಬಹುದಾಗಿದೆ. ಇದರಿಂದಾಗಿ BSNL ನ ಭಿನ್ನತೆಯನ್ನು ಖಂಡಿತವಾಗಿಯೂ ಗ್ರಾಹಕರು ಗಮನಿಸುತ್ತಾರೆ ಎಂಬ ವಿಶ್ವಾಸವಿದೆ.”
BSNL ಈಗಾಗಲೇ ದೇಶದಾದ್ಯಂತ 1 ಲಕ್ಷ 4G ಟವರ್ಗಳನ್ನು ‘ಮೇಕ್ ಇನ್ ಇಂಡಿಯಾ’ ತಂತ್ರಜ್ಞಾನದ ಮೂಲಕ ಸ್ಥಾಪಿಸಲು ಸಜ್ಜಾಗಿದೆ. ಈ ಪ್ರಾರಂಭವು ಡಿಜಿಟಲ್ ಇಂಡಿಯಾನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿನ ದೊಡ್ಡ ಹೆಜ್ಜೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.