ನೆಬಿಲೊ ಟೆಕ್ನಾಲಜೀಸ್‌ನ ಸರ್ವರ್ ಹ್ಯಾಕ್: ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು! ಬೆಂಗಳೂರಿನಲ್ಲಿ ಅತಿದೊಡ್ಡ ಸೈಬರ್ ವಂಚನೆ

ನೆಬಿಲೊ ಟೆಕ್ನಾಲಜೀಸ್‌ನ ಸರ್ವರ್ ಹ್ಯಾಕ್: ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ಕಳವು! ಬೆಂಗಳೂರಿನಲ್ಲಿ ಅತಿದೊಡ್ಡ ಸೈಬರ್ ವಂಚನೆ

ಬೆಂಗಳೂರು, ಜುಲೈ 30 – ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ಸೈಬರ್ ಅಪರಾಧವೊಂದು ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಾದ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸರ್ವರ್‌ನ್ನು ಸೈಬರ್ ಖದೀಮರು ಹ್ಯಾಕ್ ಮಾಡಿ, ಸುಮಾರು ₹378 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿ (44 ಮಿಲಿಯನ್ USDT) ಕಳವು ಮಾಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಕಂಪನಿಯಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಿದ್ದ ನೌಕರನ ಲ್ಯಾಪ್‌ಟಾಪ್‌ನ ಮೂಲಕವೇ ಈ ದಾಳಿ ನಡೆದಿರುವ ಶಂಕೆಯಿದೆ. ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಂಪನಿಯ ಆಂತರಿಕ ಭದ್ರತಾ ವ್ಯವಸ್ಥೆ, ಬಳಕೆದಾರ ತಂತ್ರಾಂಶ ಹಾಗೂ ಕ್ರಿಪ್ಟೋ ವಾಲೆಟ್ ಪ್ರೋಟೋಕಾಲ್‌ಗಳ ಮೇಲೆ ಇದೀಗ ಗಂಭೀರ ಪ್ರಶ್ನೆಗಳು ಏಳುತ್ತಿದೆ, ಈ ದಾಳಿ ಹೇಗೆ ಸಾಧ್ಯವಾಯಿತು ಎಂಬುದರ ತನಿಖೆ ತೀವ್ರವಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ ಇದು ಸೈಬರ್ ಭದ್ರತೆಯ ಕಡೆಗೆ ಎಚ್ಚರಿಕೆಯ ಘಂಟೆ ಎಳೆಯುವ ಘಟನೆಯಾಗಿದೆ.

ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಇತರ ಶಂಕಿತ ವ್ಯಕ್ತಿಗಳ ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದು, ಪ್ರಕರಣವನ್ನು ಹೆಚ್ಚಿನ ತಾಂತ್ರಿಕ ತಜ್ಞರ ಸಹಕಾರದಿಂದ ಮುಂದಕ್ಕೆ ಸಾಗಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಅಪರಾಧ