🎬 ಕಾಂತಾರ ಚಾಪ್ಟರ್ 1′ ಚಿತ್ರೀಕರಣ ಮುಕ್ತಾಯ

🎬 ಕಾಂತಾರ ಚಾಪ್ಟರ್ 1′ ಚಿತ್ರೀಕರಣ ಮುಕ್ತಾಯ

ನಟ-ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕಾಂತಾರ ಚಾಪ್ಟರ್ 1’ ಚಿತ್ರೀಕರಣ ಮುಗಿದಿದ್ದು, ಹೊಂಬಾಳೆ ಫಿಲ್ಮ್ಸ್ ಈ ಸುದ್ದಿ ಪ್ರಕಟಿಸಿದೆ. ‘ವ್ರಾಪ್ ಅಪ್… ದ ಜರ್ನಿ ಬೀಗಿನ್ಸ್’ ಎಂಬ ಶೀರ್ಷಿಕೆಯಲ್ಲಿ ಹೊಸ ಪೋಸ್ಟರ್ ಅನ್ನು ಶೇರ್ ಮಾಡಲಾಗಿದೆ.

ಚಿತ್ರೀಕರಣದೊಳಗಿನ ಕೆಲ ವಿಶೇಷ ಕ್ಷಣಗಳನ್ನು #WorldOfKantara ಮೂಲಕ ಹೊಂಬಾಳೆ ಫಿಲ್ಮ್ಸ್ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಂಡಿದೆ.

ಇನ್ನು ಚಾಪ್ಟರ್-1 ಅನ್ನು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.

ಸಿನಿಮಾ ಅಕ್ಟೋಬರ್ 2ರಂದು ವಿಶ್ವದಾದ್ಯಾಂತ ತೆರೆಮೇಲೆ ಬರಲಿದ್ದು, ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.

ಮನೋರಂಜನೆ