ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಮೃತಸರ್–ಜಾಮ್ ನಗರ ಎಕ್ಸ್‌ಪ್ರೆಸ್‌ವೇನಲ್ಲಿನ ಟೋಲ್ ಸಂಗ್ರಹಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿದೆ. ಜುಲೈ 15ರಿಂದ ಈ ನಿರ್ಧಾರವು ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆ. ಈ ನಿರ್ಧಾರದ ಹಿನ್ನೆಲೆಯು ಪ್ರಯಾಣಿಕರ ಸುರಕ್ಷತೆ ಮತ್ತು ರಸ್ತೆಯ ತಾತ್ಕಾಲಿಕ ದುರಸ್ಥಿ ಕೆಲಸಗಳ ಅಗತ್ಯತೆ ಎಂಬುದಾಗಿದೆ.

ವಿಶೇಷವಾಗಿ, ಎನ್‌ಎಚ್–754ಕೆ ರಾಷ್ಠ್ರೀಯ ಹೆದ್ದಾರಿಯ ಸಂಚೋರ್ (Sanchore)ದಿಂದ ಸಂತಲ್ಪುರ್ (Santalpur)ವರೆಗೆ ಇರುವ 28.7 ಕಿಲೋಮೀಟರ್ ದೂರದ ಭಾಗದಲ್ಲಿ ಗಂಭೀರ ರಸ್ತೆಯ ಸಮಸ್ಯೆ ಉಂಟಾಗಿರುವುದರಿಂದ, ವಾಹನಗಳ ಸಂಚಾರದ ಸೌಕರ್ಯಕ್ಕಾಗಿ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.