ಭಾರತದಲ್ಲಿ ಇಲಾನ್ ಮಸ್ಕ್‌ನ ಸ್ಟಾರ್‌ಲಿಂಕ್‌: ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸಲು ಅಂತಿಮ ಅನುಮತಿ!

ಭಾರತದಲ್ಲಿ ಇಲಾನ್ ಮಸ್ಕ್‌ನ ಸ್ಟಾರ್‌ಲಿಂಕ್‌: ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸಲು ಅಂತಿಮ ಅನುಮತಿ!

ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಶನ್ ಆ್ಯಂಡ್ ಆಥರೈಜೇಶನ್ ಸೆಂಟರ್ (IN-SPACe) ಇಲಾನ್ ಮಸ್ಕ್ ಮಾಲೀಕತ್ವದ ಸ್ಟಾರ್‌ಲಿಂಕ್‌ಗೆ ಮೊದಲ ತಲೆಮಾರಿಗೆ ಸೇರಿದ ಉಪಗ್ರಹಗಳನ್ನು ಭಾರತದಲ್ಲಿ ಬಳಸಲು ಐದು ವರ್ಷಗಳ ಅವಧಿಗೆ ಅನುಮತಿ ನೀಡಿದೆ. ಈ ಅನುಮತಿ 2030ರ ಜುಲೈ 7ರವರೆಗೆ ಮಾನ್ಯವಾಗಲಿದೆ.

ಈ ಮೂಲಕ ಸ್ಟಾರ್‌ಲಿಂಕ್, ಯುಕೆ ಆಧಾರಿತ ಯೂಟೆಲ್ಸಾಟ್ ಒನ್‌ವೆಬ್ ಮತ್ತು ಜಿಯೋ-ಎಸ್‌ಇಎಸ್ ಜಂಟಿ ಉಪಕ್ರಮದೊಂದಿಗೆ ಸೇರಿಕೊಂಡಿದೆ. ಅಮೆಜಾನ್‌ನ ಕುವಿಪರ್ ಇನ್ನೂ ಸರ್ಕಾರದ ಅನುಮತಿ ನಿರೀಕ್ಷಿಸುತ್ತಿದೆ.

ವಾಣಿಜ್ಯ ಸೇವೆ ಆರಂಭಕ್ಕೆ ಇನ್ನೂ ಕಾಲವಿದೆ. ಸ್ಟಾರ್‌ಲಿಂಕ್ ನೆಲದ ಆಧಾರಿತ ಗೇಟ್‌ವೇ ಸ್ಥಾಪಿಸಬೇಕು ಮತ್ತು ಸರ್ಕಾರದಿಂದ ಸ್ಪೆಕ್ಟ್ರಂ ಹಂಚಿಕೆ ನಿರೀಕ್ಷೆಯಲ್ಲಿದೆ. ಸ್ಟಾರ್‌ಲಿಂಕ್‌ಗೆ ಈಗಾಗಲೇ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ISP) ಮತ್ತು VSAT ಪರವಾನಗಿ ಸಿಕ್ಕಿದೆ.

ಇದು ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ಹಿನ್ನೆಲೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಭಾರತದ ಕಠಿಣ ಭದ್ರತಾ ನಿಯಮಗಳನ್ನು ಪಾಲನೆ ಮಾಡುವುದು ಕಂಪನಿಗಳಿಗೆ ಅವಶ್ಯಕವಾಗಿದೆ.

ತಂತ್ರಜ್ಞಾನ ರಾಷ್ಟ್ರೀಯ