ಬರ್ಮಿಂಗ್‌ಹ್ಯಾಮ್ : ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಭಾರತ ಉತ್ತಮ ಸ್ಥಿತಿಯತ್ತ ಸಾಗಿದೆ ಟಾಸ್ ಗೆದ್ದು ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿದೆ.ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಅವರು ಕೇವಲ 2 ರನ್ ಗೆ ಔಟ್ ಆದರು.


ಆದರೆ ನಂತರ ಯಶಸ್ವಿ ಜೈಸ್ವಾಲ್ ಮತ್ತು ಕರುನ್ ನಾಯರ್ 80 ರನ್ ಗಳ ಪ್ರಮುಖ ಜೊತೆಯಾಟ ನೀಡಿದರು. ಮೂರನೇ ಸೆಷನ್‌ನಲ್ಲಿ ಶುಭಮನ್ ಗಿಲ್ ಅವರ 8ನೇ ಟೆಸ್ಟ್ ಅರ್ಧಶತಕ ಪೂರೈಸಿದರು. ರಿಷಭ್ ಪಂತ್ 25 ರನ್ ಗಳಿಸಿ ಔಟ್ ಆದರೆ, ನಿತೀಶ್ ಕುಮಾರ್ ರೆಡ್ಡಿ ಕೇವಲ 1 ರನ್ ಗೆ ಔಟ್ ಆದರು. ಆದರೆ ನಂತರ ಗಿಲ್-ಜಡೇಜಾ ನಡುವೆ 99 ರನ್‌ಗಳ ಅಮೂಲ್ಯ ಜೊತೆಯಾಟ ಮೂಡಿ ಬಂತು.
ನಾಯಕ ಶುಭಮನ್ ಗಿಲ್ ಶತಕದ ಜೊತೆಗೆ ಅಜೇಯರಾಗಿ ಆಗಿ ಕ್ರೀಸಿನಲ್ಲಿ ಉಳಿದಿದ್ದಾರೆ. ಅವರು ಈ ಟೆಸ್ಟ್ ಸರಣಿಯ ಎರಡನೇ ಶತಕ ಸಾಧಿಸಿದ್ದು, ತಂಡಕ್ಕೆ ಭರ್ಜರಿ ಆಧಾರ ನೀಡಿದ್ದಾರೆ. ಅವರ ಜೊತೆ ರವೀಂದ್ರ ಜಡೇಜಾ 41 ರನ್ ಗಳಿಸಿ ನಾಟೌಟ್ ಆಗಿದ್ದಾರೆ. ಇವರು ಇಂದು (ದ್ವಿತೀಯ ದಿನ) ಇನ್ನಿಂಗ್ಸ್ ಮುಂದುವರಿಸಲಿದ್ದಾರೆ. ಪಂದ್ಯವು ಸಂಜೆ 3:30ಕ್ಕೆ ಆರಂಭವಾಗಲಿದೆ.

ಇಂಗ್ಲೆಂಡ್ ಪರವಾಗಿ ಫಾಸ್ಟ್ ಬೌಲರ್ ಕ್ರಿಸ್ ವೋಕ್ಸ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು 2 ವಿಕೆಟ್ ಪಡೆದರು — ಕೆಎಲ್ ರಾಹುಲ್ ಮತ್ತು ನಿತೀಶ್ ರೆಡ್ಡಿ ಅವರನ್ನು ಬೋಲ್ಡ್ ಮಾಡಿದ್ದಾರೆ.ಬೆನ್ ಸ್ಟೋಕ್ಸ್ ಯಶಸ್ವಿ ಜೈಸ್ವಾಲ್ ವಿಕೆಟ್ ಪಡೆದರು. ಶೋಯೆಬ್ ಬಷೀರ್ ರಿಷಭ್ ಪಂತ್ ವಿಕೆಟ್ ಪಡೆದುಕೊಂಡರೆ, ಬ್ರೈಡನ್ ಕಾರ್ಸ್ ಕರುನ್ ನಾಯರ್ ಅವರನ್ನು ಔಟ್ ಮಾಡಿದರು.