ಭಾರತೀಯ ರೈಲ್ವೆ ‘RailOne’ ಎಂಬ ಹೊಸ ಸುಧಾರಿತ ಮೊಬೈಲ್ ಅಪ್ಲಿಕೇಶನ್‌ನ್ನು ಬಿಡುಗಡೆ ಮಾಡಿದ್ದು, ಪ್ರಯಾಣಿಕರು ಇಂದಿನಿಂದಲೇ ಟಿಕೆಟ್ ಬುಕ್ ಮಾಡುವುದು, PNR ಸ್ಥಿತಿ ಪರಿಶೀಲನೆ, ಲೈವ್ ಟ್ರೈನ್ ಸ್ಟೇಟಸ್ ನೋಡುವುದು, ಆಹಾರ ಆರ್ಡರ್ ಮಾಡುವುದು ಮತ್ತು ದೂರುಗಳನ್ನು ದಾಖಲಿಸುವುದುಲ್ಲವೂ ಒಂದೇ ಅಪ್ಲಿಕೇಶನ್‌ನಲ್ಲಿ ಸಾಧ್ಯವಾಗಿದೆ.



ಈ ಅಪ್ಲಿಕೇಶನ್ ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, IRCTC, UTS, RailMadad ಮೊದಲಾದ ಎಲ್ಲ ಸೇವೆಗಳನ್ನು ಒಂದೇ ತಾಣದಲ್ಲಿ ನೀಡುತ್ತಿದೆ. RailOne ಬಳಕೆದಾರರ ಅನುಭವ ಸುಲಭವಾಗಿಸುವ ಮೂಲಕ ಡಿಜಿಟಲ್ ರೈಲ್ವೆ ಸೇವೆಗಳ ಹೊಸ ಯುಗಕ್ಕೆ ಚಾಲನೆ ನೀಡಿದೆ.