ದೆಹಲಿ, ಜೂನ್ 30 – ದೇಶದ ರಾಜಧಾನಿ ದೆಹಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಕೃತಕ ಮಳೆಯ (Artificial Rain) ನೆರವಿನಿಂದ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮಹತ್ವದ ಹೆಜ್ಜೆ ಇಡುತ್ತಿದೆ. ದೆಹಲಿಯ ಪರಿಸರ ಸಚಿವಾಲಯವು ಜುಲೈ 4ರಿಂದ 11ರವರೆಗೆ ಕ್ಲೌಡ್ ಸೀಡಿಂಗ್ (Cloud Seeding) ಮಾಡುವ ಯೋಜನೆ ಹಾಕಿಕೊಂಡಿದೆ.


ಈ ಕ್ರಮದಿಂದ ದೆಹಲಿಯ ಮೇಲೆ ಆವರಿಸಿದ ದಟ್ಟ ಮಾಲಿನ್ಯವನ್ನು ತಗ್ಗಿಸಲು ಹಾಗೂ ಜನರಿಗೆ ಶುದ್ಧ ಗಾಳಿಯನ್ನು ಒದಗಿಸಲು ಸರ್ಕಾರ ಮುಂದಾಗಿದೆ. ದೆಹಲಿಯಲ್ಲಿ ಕೆಲ ವರ್ಷಗಳಿಂದ ಏಕಾಏಕಿ ವಾಯು ಗುಣಮಟ್ಟ ಕುಸಿಯುತ್ತಿರುವುದರಿಂದ, ಆರೋಗ್ಯ ಸಮಸ್ಯೆಗಳ ಹೆಚ್ಚಳವೂ ಕಂಡುಬಂದಿದೆ. ಈ ಹಿನ್ನಲೆಯಲ್ಲಿ, ಪರಿಸರ ಇಲಾಖೆ ಈ ಕೃತಕ ಮಳೆಯ ಯೋಜನೆ ರೂಪಿಸಿದೆ.