ಪುರಿ ರಥಯಾತ್ರೆ ತೀವ್ರ ಜನಸಂದಣಿ: 724 ಜನರಿಗೆ ಚಿಕಿತ್ಸೆ, ಇಬ್ಬರ ಸಾವು

ಪುರಿ ರಥಯಾತ್ರೆ ತೀವ್ರ ಜನಸಂದಣಿ: 724 ಜನರಿಗೆ ಚಿಕಿತ್ಸೆ, ಇಬ್ಬರ ಸಾವು

ಭವನೇಶ್ವರ: ಪುರಿಯಲ್ಲಿ ನಡೆದ ರಥಯಾತ್ರೆ ವೇಳೆ ಭಾರೀ ಜನಸಂದಣಿಯಿಂದ ತುಳಿತದಂತಹ ಪರಿಸ್ಥಿತಿ ಉಂಟಾಗಿ, 724 ಜನರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆ ಜನಸಂದಣಿ ನಿರ್ವಹಣೆ ಯಲ್ಲಿ ಮಾರ್ಗದೋಷ ಎಂಬ ಆರೋಪಗಳು ಕೇಳಿಬಂದಿವೆ.

ಆರೋಗ್ಯ ಇಲಾಖೆಯ ಪ್ರಕಾರ, 724 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲೆಯಾಗಿದ್ದು, ಅವರಲ್ಲಿ 485 ಮಂದಿ ಪ್ರಾಥಮಿಕ ಚಿಕಿತ್ಸೆ ನಂತರ ಬಿಡುಗಡೆಗೊಂಡಿದ್ದಾರೆ. ಆದರೆ ನಾಲ್ಕು ಮಂದಿ ತೀವ್ರ ಅನಾರೋಗ್ಯದಿಂದ ಐಸಿಯುಗೆ ದಾಖಲಾಗಿದ್ದಾರೆ.

ಜಿಲ್ಲಾ ಆಸ್ಪತ್ರೆಗೆ ಇಬ್ಬರ ಸಾವು ವರದಿಯಾಗಿದೆ. ಆದರೆ ವೈದ್ಯಾಧಿಕಾರಿಗಳು ಈ ಸಾವುಗಳು ರಥಯಾತ್ರೆಗೆ ನೇರ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. liver cirrhosis ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮತ್ತು chronic obstructive pulmonary disease ಹೊಂದಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.

ಶುಕ್ರವಾರ ಜಗನ್ನಾಥ ದೇವಾಲಯದಲ್ಲಿ ಪಹಾಂಡಿ ಬಿಜೆ ಹಾಗೂ ಛೇರಾ ಪಹಾರಾ ಧಾರ್ಮಿಕ ವಿಧಿವಿಧಾನಗಳ ನಂತರ, ಮಧ್ಯಾಹ್ನ 3 ಗಂಟೆಗೆ ರಥ ಎಳೆಯುವ ಕಾರ್ಯಾರಂಭವಾಗಿ ಸಂಜೆ 6:15 ಕ್ಕೆ ಮುಕ್ತಾಯವಾಯಿತು. ISKCON ಸಂಸ್ಥೆಯ ಪ್ರಕಾರ 2-3 ಲಕ್ಷ ಭಕ್ತರು ಭಾಗವಹಿಸಿದ್ದರು ಮತ್ತು 30,000 ಮಂದಿಗೆ ಉಚಿತ ಪ್ರಸಾದ ವಿತರಿಸಲಾಯಿತು

ಧಾರ್ಮಿಕ ರಾಷ್ಟ್ರೀಯ