ವಿದ್ಯಾರ್ಥಿಗಳಿಗೂ ಸಾರ್ವಜನಿಕರಿಗೂ ಈಗ ಕೇರಳದ ಕೆಎಸ್‌ಆರ್‌ಟಿಸಿ (KSRTC) ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ! ಪ್ರಯಾಣಿಕರ ಸೌಲಭ್ಯಕ್ಕಾಗಿ ಈಗಾಗಲೇ ಘೋಷಣೆಯಾದ ಸ್ಮಾರ್ಟ್ ಕಾರ್ಡ್‌ಗಳು, ಟಿಕೆಟ್ ಮಷೀನಿನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪ್ರಯಾಣಕ್ಕೆ ಅನುಮತಿ ನೀಡಲಿದ್ದು, ಚಿಲ್ಲರೆ ಸಮಸ್ಯೆಯೂ ಇಲ್ಲದಂತಾಗಲಿದೆ.


1 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಪ್ರತಿ ತಿಂಗಳು 25 ದಿನ ನಿಗದಿತ ಮಾರ್ಗದಲ್ಲಿ ಪ್ರಯಾಣಿಸಲು ಚಿಪ್ ಆಧಾರಿತ ಕಾರ್ಡ್ ಬಳಸಿ ಪರವಾನಗಿಯನ್ನು ಪಡೆಯಬಹುದಾಗಿದೆ. ಪ್ಲಸ್ ಒನ್ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಯ ಕಾರ್ಡ್ ನೀಡಲಾಗುವುದು ಎಂದು ಸಾರಿಗೆ ಸಚಿವ ಕೆ. ಬಿ. ಗಣೇಶ್ ಕುಮಾರ್ ತಿಳಿಸಿದ್ದಾರೆ.
ಈ ವ್ಯವಸ್ಥೆಯಿಂದ ಸಮಯ ಮತ್ತು ಶ್ರಮ ಉಳಿಯುತ್ತದೆ. ಚಿಲ್ಲರೆ ಸಮಸ್ಯೆಗೂ ಇದರ ಮೂಲಕ ಅಂತ್ಯವಾಗಲಿದೆ.ಇದು ಕೇರಳದಲ್ಲಿ ಸಾರಿಗೆ ಸೇವೆ ಮತ್ತಷ್ಟು ಸುಧಾರಣೆಯಾಗುವ ಹೆಜ್ಜೆ ಎಂದು ಸಚಿವರು ತಿಳಿಸಿದ್ದಾರೆ.