ಸುಳ್ಯ: ಚಿತೇಶ್ ಸಂಗೀತ ಬಳಗ, ಐವರ್ನಾಡು ಆಶ್ರಯದಲ್ಲಿ ಸಂಗೀತ ಸ್ಪರ್ಧೆ (ಕರೋಕೆ) ಸೀಸನ್-2 ಮಾರ್ಚ್ 30, 2025 (ರವಿವಾರ) ರಂದು ಆಯೋಜಿಸಲಾಗಿದೆ. ಈ ಸ್ಪರ್ಧೆ ಬೆಳಗ್ಗೆ 9:00 ಗಂಟೆಗೆ ಆರಂಭವಾಗಲಿದ್ದು, ಸ್ಪರ್ಧಾಳುಗಳಿಗೆ ಕನ್ನಡ, ತುಳು, ತಮಿಳು ಮತ್ತು ಮಲಯಾಳಂ ಭಾಷೆಯ ಚಿತ್ರಗೀತೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.


ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳು ಇರಲಿದ್ದು,ಹಿರಿಯರ ಮತ್ತು ಕಿರಿಯರ ವಿಭಾಗವಿರುತ್ತದೆ,ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ಮೊದಲು ಹೆಸರು ನೋಂದಾಯಿಸಿದ 40 ಸ್ಪರ್ಧಿಗಳಿಗೆ ಮಾತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮಾರ್ಚ್ 20, 2025ರೊಳಗಾಗಿ ತಮ್ಮ ಹೆಸರು ನೋಂದಾಯಿಸಬೇಕು. ಪ್ರವೇಶ ಶುಲ್ಕ ₹400/- ಆಗಿರುತ್ತದೆ, ಮತ್ತು ನೋಂದಣಿಗಾಗಿ G-Pay ನಂಬರ್: 9591758471 ಅನ್ನು ಬಳಸಬಹುದು. ಸ್ಪರ್ಧಾಳುಗಳು ಕರೋಕೆ ತಾವೇ ತರತಕ್ಕದ್ದು, ಹಾಗು ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಈ ಕಾರ್ಯಕ್ರಮವು ಸ್ಪರ್ಧಿಗಳನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ನಡೆಯುತ್ತದೆ.
ಸ್ಪರ್ಧೆಯು ಸ.ಹಿ.ಪ್ರಾ. ಶಾಲೆ, ಐವರ್ನಾಡು, “ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ ರಂಗಮಂದಿರ”ದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಂದು ಮಧ್ಯಾಹ್ನದ ಭೋಜನ ಹಾಗೂ ಸಂಜೆಯ ಚಹಾ ಒದಗಿಸಲಾಗುವುದು. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಕಲೆಯನ್ನು ಪ್ರದರ್ಶಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.