ಅರಿಜೋನಾ : ವಿಮಾನಗಳ ನಡುವೆ ಡಿಕ್ಕಿ; ಇಬ್ಬರು ಸಾವು

ಅರಿಜೋನಾ : ವಿಮಾನಗಳ ನಡುವೆ ಡಿಕ್ಕಿ; ಇಬ್ಬರು ಸಾವು

ವಾಷಿಂಗ್ಟನ್ ‌: ದಕ್ಷಿಣ ಅರಿಜೋನಾದ ಮರಾನಾ ಪ್ರಾದೇಶಿಕ ವಿಮಾನ ನಿಲ್ದಾಣದ ಬಳಿ ಎರಡು ಸಣ್ಣ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸೆಸ್ನಾ(Cessna 172S) ಮತ್ತು ಲಂಕೈರ್ (Lancair 360 MK II) ವಿಮಾನಗಳ ನಡುವೆ ಮರಾನಾ ಪ್ರಾದೇಶಿಕ ವಿಮಾನ ನಿಲ್ದಾಣದ ಬಳಿ ಇಂದು ಬೆಳಿಗ್ಗೆ 8:30ರ ಸುಮಾರಿಗೆ ಡಿಕ್ಕಿ ಸಂಭವಿಸಿದೆ. ಎರಡು ವಿಮಾನದಲ್ಲಿ ತಲಾ ಇಬ್ಬರು ಪ್ರಯಾಣಿಸುತ್ತಿದ್ದರು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತಿಳಿಸಿದೆ.

ಅಪಘಾತದಲ್ಲಿ ಲಂಕೈರ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಸೆಸ್ನಾ ವಿಮಾನವು ಅಡ್ಡಾದಿಡ್ಡಿಯಾಗಿ ಬಿದ್ದಿದೆ. ಅದರಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಜನವರಿ ತಿಂಗಳ ಅಂತ್ಯದಲ್ಲಿ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಾದೇಶಿಕ ಪ್ರಯಾಣಿಕ ಜೆಟ್‌ ಮತ್ತು ಹೆಲಿಕಾಪ್ಟರ್ ನಡುವೆ ಡಿಕ್ಕಿ ಸಂಭವಿಸಿದ್ದು, 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

ಅಂತರಾಷ್ಟ್ರೀಯ